ರಾಹುಲ್ ಗಾಂಧಿ ಬ್ರಿಗೇಡ್: ಜಿಲ್ಲಾಧ್ಯಕ್ಷರಾಗಿ ಮಹಮದ್ ಝಮೀರ್ ಆಯ್ಕೆ

ಉಡುಪಿ (ಉಡುಪಿ ಟೈಮ್ಸ್ ವರದಿ) : ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಾಧ್ಯಕ್ಷ ಎಂ ಜಿ ಅಖಿಲ್ ಅಹಮ್ಮದ್, ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಝಮೀರ್  ರವರನ್ನು ನೇಮಕ ಮಾಡಿದ್ದಾರೆ.

ರಾಜ್ಯಾಧ್ಯಕ್ಷರ ಸೂಚನೆಯಂತೆ ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಕಾಂಗ್ರೆಸ್ ನ ಉಡುಪಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ಆಕಾಶ್ ಪೂಜಾರಿ, ಮಹಮ್ಮದ್ ಅಕ್ರಂ, ಪ್ರಧಾನ ಕಾರ್ಯದರ್ಶಿಗಳಾಗಿ ಎಲ್ ಸ್ಟನ್ ನೊರೊನ್ನಾ, ಅಮಿತ್ ಕುಮಾರ್, ಕೀರ್ತನ್ ಕುಮಾರ್, ಕ್ರಿಸ್ಟೊನ್ ಶೆಲ್ಡನ್ ಅರೋನ್, ಮಿಸ್ಬಾ, ಗಗನ್ ಆರ್ ಸಾಲ್ಯಾನ್, ಕಾರ್ಯನಿರತ ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಫಯಾಲ್, ಕಾರ್ಯದರ್ಶಿಗಳಾಗಿ ವಿಗ್ನೇಶ್ ಶೆಟ್ಟಿ, ರೋಹಿತ್ ಪೂಜಾರಿ, ಮಹಮ್ಮದ್ ನಿಯಾಜ್ ರವರನ್ನು ಜಿಲ್ಲಾಧ್ಯಕ್ಷರು ನೇಮಿಸಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲಾ ಆಲ್ ಇಂಡಿಯಾ ರಾಹುಲ್ ಗಾಂಧಿ ಬ್ರಿಗೇಡ್ ಕಾಂಗ್ರೆಸ್ ವತಿಯಿಂದ ಕಲ್ಯಾಣ್ ಪುರದ ಮಮತೆಯ ತೊಟ್ಟಿಲು ಆಶ್ರಮದಲ್ಲಿ ಮಕ್ಕಳೊಂದಿಗೆ ವಿಶೇಷ ರೀತಿಯಲ್ಲಿ ಆಚರಿಸಿತ್ತು. ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಉತ್ಸಾಹಿ ಸಮಿತಿಯ ನೇತೃತ್ವದಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಸಂಘಟನೆಯಲ್ಲಿ ಸೇರ್ಪಡೆಯಾಗುವವರಿಗೆ ಈ ಲಿಂಕ್  https://forms.gle/2xsfoR38uNzQ1MWr5 ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಹಮ್ಮದ್ ಝಮೀರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!