ಕಾರ್ಕಳ: ಎಪಿಎಂಸಿ ಅಧ್ಯಕ್ಷ ನಂದಳಿಕೆ ಮೋಹನ್ ದಾಸ್ ಶೆಟ್ಟಿ ಇನ್ನಿಲ್ಲ
ಕಾರ್ಕಳ, ಜೂ. 21: ಎಪಿಎಂಸಿ ಅಧ್ಯಕ್ಷ ನಂದಳಿಕೆ ಮೋಹನ್ ದಾಸ್ ಶೆಟ್ಟಿ (62) ತೀವ್ರ ಅನಾರೋಗ್ಯದಿಂದಾಗಿ ಇಂದು ನಿಧನರಾಗಿದ್ದಾರೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಮೋಹನ್ ದಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಮೃತರು ಬ್ಯಾಂಕ್ ವೊಂದರಲ್ಲಿ ನಿವೃತ್ತ ಉದ್ಯೋಗಿಯಾಗಿದ್ದರು. ನಂತರದ ದಿನಗಳಲ್ಲಿ ಸಕ್ರಿಯಾವಾಗಿ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದರು. ಪ್ರಸ್ತುತ ಕಾರ್ಕಳ ಎಪಿಎಂಸಿ ಅಧ್ಯಕ್ಷರಾಗಿದ್ದರು.