ರಾಜ್ಯದಲ್ಲಿ ಲಾಕ್ ಡೌನ್ ಅವಧಿಯ ಎರಡುವರೆ ತಿಂಗಳಲ್ಲಿ ಬರೋಬ್ಬರಿ ರೂ.4,500 ಕೋಟಿ ವರಮಾನ!
ಬೆಂಗಳೂರು ಜೂ21: ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಸಾಮಾನ್ಯ ದಿನಗಳಿಗಿಂತ ಅಬಕಾರಿ ಇಲಾಖೆಯಲ್ಲಿ ಶೇ 10 ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಿದೆ.
ಈ ಬಗ್ಗೆ ಅಬಕಾರಿ ಸಚಿವ ಕೆ. ಗೋಪಾಲಯ್ಯ ಮಾಹಿತಿ ನೀಡಿದ್ದು, ಲಾಕ್ ಡೌನ್ ವಿಧಿಸಿದ ಬಳಿಕ ಏಪ್ರಿಲ್ 1 ರಿಂದ ಜೂನ್ 15 ರ ಅವಧಿಯಲ್ಲಿ ಅಬಕಾರಿ ಇಲಾಖೆಗೆ ರೂ 4,500 ಕೋಟಿ ವರಮಾನ ಬಂದಿದೆ. ಇದು ಸಾಮಾನ್ಯ ದಿನಗಳ ಲಾಭಕ್ಕಿಂತ ಶೇ 10 ರಷ್ಟು ಹೆಚ್ಚು ಲಾಭ ಬಂದಂತಾಗಿದೆ ಎಂದು ತಿಳಿಸಿದ್ದಾರೆ.