ಟಿಕ್​ಟಾಕ್,ಯುಸಿ ಬ್ರೌಸರ್, ಶೇರ್‌ಇಟ್ ಸಹಿತ ಚೀನಾದ 59 ಆ್ಯಪ್​​ಗಳ ನಿಷೇಧ!

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ಉಂಟಾಗಿ, ಭಾರತದ ಯೋಧರನ್ನು ಚೀನಾ ಸೈನಿಕರು ಹತ್ಯೆ ಮಾಡಿದ ಬೆನ್ನಲ್ಲೇ ದೇಶದಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಕೂಗು ಕೇಳಿಬರುತ್ತಿದೆ. ಅಷ್ಟೇ ಅಲ್ಲ, ಚೀನಾ ಅಭಿವೃದ್ಧಿ ಪಡಿಸಿದ ಆ್ಯಪ್​ಗಳನ್ನು ಮೊಬೈಲ್​ನಿಂದ ಅನ್​ಇನ್ಸ್ಟಾಲ್​ ಮಾಡಿ ಎಂದು ಹಲವು ಪ್ರಮುಖ ಸಂಘಟನೆಗಳು, ಸೆಲೆಬ್ರಿಟಿಗಳು ಕರೆ ನೀಡುತ್ತಿದ್ದಾರೆ.

ಈ ಮಧ್ಯೆ ಕೇಂದ್ರ ಸರ್ಕಾರವೇ ಮಹತ್ವದ ನಿರ್ಧಾರವನ್ನೊಂದು ಕೈಗೊಂಡಿದೆ. ಚೀನಾದ ಒಟ್ಟು 59 ಆ್ಯಪ್​​ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ 59 ಆ್ಯಪ್​ಗಳಲ್ಲಿ ಬಹು ಪ್ರಚಲಿತ ಟಿಕ್​ಟಾಕ್​ ಕೂಡ ಒಂದು. 

ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ದೇಶದ ಸಮಗ್ರತೆ ಮತ್ತು ಏಕತೆ, ದೇಶದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ 59 ಆ್ಯಪ್ ಗಳನ್ನು  ನಿರ್ಬಂಧಿಸಲು ನಿರ್ಧರಿಸಲಾಗಿದೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!