ಗಂಗೊಳ್ಳಿ: ಭಾವನೊಂದಿಗೆ ನಾದಿನಿ ಪರಾರಿ?
ಗಂಗೊಳ್ಳಿ ಜೂ.20 (ಉಡುಪಿ ಟೈಮ್ಸ್ ವರದಿ): ಪೇಟೆಗೆ ಹೋಗಿ ಬರುವುದಾಗಿ ಹೇಳಿದ ಭಾವ, ನಾದಿನಿ ನಾಪತ್ತೆಯಾಗಿರುವ ಘಟನೆ ಕುಂದಾಪುರದ ಆಲೂರು ಗ್ರಾಮದಲ್ಲಿ ನಡೆದಿದೆ.
ಚಂದ್ರ (42 ವರ್ಷ) ಮತ್ತು ವನಜ (29 ವರ್ಷ) ನಾಪತ್ತೆಯಾದವರು. ಈ ಬಗ್ಗೆ ಚಂದ್ರ ಅವರ ಪತ್ನಿ ಬಾಬಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಚಂದ್ರ ಹಾಗೂ ಬಾಬಿ ಅವರ ಚಿಕ್ಕಮ್ಮನ ಮಗಳು ವನಜ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಜೂ.7 ರಂದು ಮಧ್ಯಾಹ್ನದ ವೇಳೆಗೆ ಚಂದ್ರರವರು ಪೇಟೆಗೆ ಹೋಗುವುದಾಗಿ ಹೇಳಿ ಹೋಗಿದ್ದರು, ಅದೇ ದಿನ ಮಧ್ಯಾಹ್ನ ವನಜಾ ರವರು ಸಹ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಇಬ್ಬರೂ ಕೂಡ ಈವರೆಗೆ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಅದರಂತೆ ಚಂದ್ರ ಹಾಗೂ ವನಜ ರವರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಹೋಗಿರಬಹುದು ಎಂದು ಬಾಬಿಯವರು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.