| ಉಡುಪಿ ಜೂ.20(ಉಡುಪಿ ಟೈಮ್ಸ್ ವರದಿ): ಉಡುಪಿಯ ಇಶ್ನಾ ಪ್ಲೇ ಸ್ಕೂಲ್ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಆನ್ಲೈನ್ ಟಾಕ್ ಶೋ ಅನ್ನು ಆಯೋಜಿಸಲಾಗಿದೆ.
ಈ ಆನ್ಲೈನ್ ಟಾಕ್ ಶೋ ಜೂ.21 ರಂದು ರಾತ್ರಿ 7.30 ರಿಂದ 9 ಗಂಟೆ ವರೆಗೆ ಝೂಮ್ ಆಪ್ ನಲ್ಲಿ ನಡೆಯಲಿದೆ. ಈ ಟಾಕ್ ಶೋ ನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗದೊಂದಿಗೆ ಜೀವನ ವಿಧಾನ (ಎವೇ ಆಫ್ ಲೈಫ್ ತ್ರೂ ನ್ಯಾಚುರೋಪತಿ ಮತ್ತು ಯೋಗ) ಎಂಬ ಬಗ್ಗೆ ARHA yoga and wellness ಉಡುಪಿ ಇದರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ತಜ್ಞೆ ಡಾ.ಸ್ಪೂರ್ತಿ ಎ. ಶೆಟ್ಟಿ ಅವರು ಮಾಹಿತಿ ನೀಡಲಿದ್ದಾರೆ
ಈ ಚರ್ಚಾ ಕಾರ್ಯಕ್ರಮದಲ್ಲಿ ಆಯುರ್ವೇದ ವಿಧಾನದಲ್ಲಿ ಜೀವಿಸುವುದು( ಲೀವಿಂಗ್ ದ ಆಯುರ್ವೇದ ವೇ) ಎಂಬ ವಿಚಾರದ ಕುರಿತು ಉಡುಪಿಯ ಒಳನಾಡಿನ ಅಥರ್ವ ಆಯುರ್ವೇದ ಕ್ಲೀನಿಕ್ ನ ಆಯುರ್ವೇದ ನಿರ್ದೇಶಕಿ ಡಾ. ಅಪೇಕ್ಷಾ ಡಿ ರಾವ್ ಮಾಹಿತಿ ನೀಡಲಿದ್ದಾರೆ. ಈ ವೇಳೆಮೇಕ್ ಆರ್ ಬ್ರೇಕ್ ಹ್ಯಾಬಿಟ್ಸ್ ಎಂಬ ವಿಚಾರದ ಕುರಿತು ಶ್ರೀರಂಶ್ ವೆಂಚರ್ಸ್ ಪ್ರೈ.ಲಿನ ವ್ಯವಸ್ಥಾಪಕ ನಿರ್ದೇಶಕ ರಂಜಿತ್ ಆರ್ ಶೆಟ್ಟಿ ಮಾಹಿತಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ 9741209805 ಗೆ ಸಂಪರ್ಕಿಸುವಂತೆ ಶ್ರೀರಂಶ್ ವೆಂಚರ್ಸ್ ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕ ರಂಜಿತ್ ಆರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 18 ರಿಂದ 20 ರ ವರೆಗೆ ಮೂರು ದಿನಗಳ ಕಾಲ ಭಾರತ, ಮಧ್ಯಪ್ರಾಚ್ಯ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಉಚಿತ ಯೋಗ ಸೆಶನ್ಸ್ ನ್ನು ನಡೆಸಲಾಯಿತು ಇದೀಗ ಈ ಕಾರ್ಯಕ್ರಮ ನಾಳೆಯ ಟಾಕ್ ಶೋ ಮೂಲಕ ಸಂಪನ್ನ ಗೊಳ್ಳಲಿದೆ. | |