ಪತಿಯನ್ನು ಕಳೆದುಕೊಂಡ ನೋವು – 2 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ!
ಹಾಸನ ಜೂ.20: ಪತಿಯನ್ನು ಕಳೆದುಕೊಂಡ ನೋವಿನಿಂದ ಹೊರಬರಳಾಗದೆ ಮಹಿಳೆಯೊಬ್ಬರು 2 ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಆನೆಮಹಲ್ ಗ್ರಾಮದಲ್ಲಿ ನಡೆದಿದೆ.
ಪ್ರಜ್ವಲ (26), ಸಾಧ್ವಿ (2) ಮೃತಪಟ್ಟವರು. ಅಪಘಾತವೊಂದರಲ್ಲಿ ಪ್ರಜ್ವಲ ಅವರ ಗಂಡ ಸುರೇಂದ್ರ ಅವರು ಸಾವನ್ನಪ್ಪಿದ್ದರು. ಈ ಆಘಾತದಿಂದ ಪ್ರಜ್ವಲ ಹೊರಬಂದಿರಲಿಲ್ಲ.ಪತಿಯನ್ನು ಕಳೆದುಕೊಂಡು ಬೇಸರದಲ್ಲಿದ್ದ ಮಗಳ ಸ್ಥಿತಿ ಕಂಡು ಪ್ರಜ್ವಲ ಪೋಷಕರು ಆನೆಮಹಲ್ ಗ್ರಾಮದ ಮೋಹನ್ ಎಂಬುವವರೊಂದಿಗೆ ಜೂ.16 ರಂದು ಮತ್ತೊಂದು ವಿವಾಹ ಮಾಡಿದ್ದರು. ಆದರೆ ಮೊದಲ ಪತಿಯ ಸಾವಿನ ಆಘಾತದಿಂದ ಹೊರಬರಲಾಗದೆ, ಆನೆಮಹಲ್ ಗ್ರಾಮದ ಮನೆಯಲ್ಲಿಯೇ ಮಗುವನ್ನು ಕೊಂದು ನಂತರ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಸಕಲೇಶಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.