ಉಡುಪಿ: 18 ಜನರಿಗೆ ಸೋಂಕು ದೃಢ, ಜಿಲ್ಲೆಯಲ್ಲಿ ಮುಂದುವರಿದ ಆತಂಕ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಮತ್ತೆ 18 ಜನರಿಗೆ ದೃಢವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1197 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 1197 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಅದರಲ್ಲಿ 1056 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 139 ಸಕ್ರಿಯ ಪ್ರಕರಣಗಳಿದೆ.
ಜಿಲ್ಲೆಯಲ್ಲಿ ಇದುವರೆಗೆ 14268 ಜನರ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ಅದರಲ್ಲಿ 12862 ಮಂದಿಯ ವರದಿ ನೆಗಟಿವ್ ಬಂದಿದೆ. 1197 ವರದಿ ಪಾಸಿಟಿವ್ ಆಗಿದ್ದರೆ, 209 ವರದಿಗಳು ಇನ್ನು ಜಿಲ್ಲಾಡಳಿತದ ಕೈ ಸೇರಬೇಕಿದೆ.
ಇಂದು ಪಾಸಿಟಿವ್ ಬಂದ 18 ಮಂದಿಯಲ್ಲಿ ಮಹಾರಾಷ್ಟ್ರ ಮುಂಬೈಗಳಿಂದ ಆಗಮಿಸಿದ 5 ಮಂದಿ, ಬೆಂಗಳೂರಿನಿಂದ ಬಂದ ನಾಲ್ವರು ಹಾಗೂ ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಸಂಪರ್ಕಿತರು 9 ಮಂದಿ ಸೇರಿದ್ದಾರೆ. ಉಡುಪಿ ತಾಲೂಕಿನ 9, ಕುಂದಾಪುರ 4 ಹಾಗೂ ಕಾರ್ಕಳ ತಾಲೂಕಿನ ಐವರು ಇವರಲ್ಲಿದ್ದಾರೆ. 13 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ 10 ವರ್ಷದೊಳಗಿನ ಒಬ್ಬ ಬಾಲಕಿಯರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಡಾ.ಸೂಡ ವಿವರಿಸಿದರು.
ಇಂದು ಪಾಸಿಟಿವ್ ಬಂದ 18 ಮಂದಿಯಲ್ಲಿ ಮಹಾರಾಷ್ಟ್ರ ಮುಂಬೈಗಳಿಂದ ಆಗಮಿಸಿದ 5 ಮಂದಿ, ಬೆಂಗಳೂರಿನಿಂದ ಬಂದ ನಾಲ್ವರು ಹಾಗೂ ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಸಂಪರ್ಕಿತರು 9 ಮಂದಿ ಸೇರಿದ್ದಾರೆ. ಉಡುಪಿ ತಾಲೂಕಿನ 9, ಕುಂದಾಪುರ 4 ಹಾಗೂ ಕಾರ್ಕಳ ತಾಲೂಕಿನ ಐವರು ಇವರಲ್ಲಿದ್ದಾರೆ. 13 ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ 10 ವರ್ಷದೊಳಗಿನ ಒಬ್ಬ ಬಾಲಕಿಯರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಡಾ.ಸೂಡ ವಿವರಿಸಿದರು.
ಹೆಬ್ರಿ ಆಸ್ಪತ್ರೆ ಮತ್ತೊಬ್ಬ ಸಿಬ್ಬಂದಿಗೆ ಪಾಸಿಟಿವ್:
ರಾಜ್ಯ ಆರೋಗ್ಯ ಇಲಾಖೆ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಇಂದು ಸ್ಥಾನ ಪಡೆದವರಲ್ಲಿ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಮತ್ತೊಬ್ಬ ಸಿಬ್ಬಂದಿ ಸೇರಿದ್ದಾರೆ. ಇದೇ ಆಸ್ಪತ್ರೆಯ ಆಯುಷ್ ವೈದ್ಯರು ಸೇರಿದಂತೆ ಒಟ್ಟು ಆರು ಮಂದಿ ಸಿಬ್ಬಂದಿಗಳು ನಿನ್ನೆ ಪಾಸಿಟಿವ್ ಬಂದವರ ಪಟ್ಟಿಯಲ್ಲಿದ್ದರು. ಈ ಮೂಲಕ ಸಿಎಚ್‌ಸಿಯ 7 ಮಂದಿ ಪಾಸಿಟಿವ್ ಬಂದಂತಾಯಿತು.
ಪ್ರಾಥಮಿಕ ಸಂಪರ್ಕಿತರ 6 ಮಂದಿ: ಸೋಮವಾರ ಸ್ಥಳೀಯವಾಗಿ ಪಾಸಿಟಿವ್ ಬಂದವರಲ್ಲಿ ಹೆಬ್ರಿ ಆಸ್ಪತ್ರೆ ಸಿಬ್ಬಂದಿ ಅಲ್ಲದೇ, ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರ ಆರು ಮಂದಿ, ಕೆಲದಿನಗಳ ಹಿಂದೆ ಪಾಸಿಟಿವ್ ಆದ ಮಣಿಪಾಲ ಕೆಎಂಸಿ ಸ್ಟಾಫ್ ನರ್ಸ್ ಸಂಪರ್ಕಿತರುಬೆಂಗಳೂರಿನಿಂದ ಊರಿಗೆ ಮರಳಿ ಬಂದು ಪಾಸಿಟಿವ್ ಆದ ನಾಲ್ವರಲ್ಲಿ ಇಬ್ಬರು ಬೈಂದೂರು ತಾಲೂಕಿನ ವಂಡ್ರೆಯವರಾದರೆ, ಒಬ್ಬರು ಉಡುಪಿ ಹಾಗೂ ಒಬ್ಬರು ಹೆಬ್ರಿಯವರು ಎಂದು ಡಾ.ಸೂಡ ತಿಳಿಸಿದರು
ಐವರು ಬಿಡುಗಡೆ: ಜಿಲ್ಲೆಯಲ್ಲಿ ಸೇವೆಡ್ ಚಿಕಿತ್ಸೆ ಬಳಿಕ ಗುಣಮುಖರಾದ ಐವರು ಇಂದು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಉಡುಪಿ ಡಾ. ಟಿಎಂಎ ಪೈ ಆಸ್ಪತ್ರೆಯಿಂದ ಮೂವರು ಹಾಗೂ ಕಾರ್ಕಳ ಸರ್ಕಾರಿ ಆಸ್ಪತ್ರೆಯ ಇಬ್ಬರು ಸೇರಿದ್ದಾರೆ. ಈ ಮೂಲಕ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ 1056 ಕ್ಕೇರಿದೆ. ಇನ್ನೂ ಕೇವಲ 139 ಮಂದಿ ಮಾತ್ರ ಜಿಲ್ಲೆಯಲ್ಲಿ ಕೊರೋನ ಸೋಂಕಿನ ಚಿಕಿತ್ಸೆ ಯಲ್ಲಿದ್ದಾರೆ ಎಂದವರು ಹೇಳಿದರು.
ಕಳೆದ ಮೂರು ದಿನಗಳಿಂದ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಹಿರಿಯ ನಾಗರಿಕರ ಸ್ಥಿತಿ ಇನ್ನೂ ಗಂಭೀರವಿದ್ದು,ಇಬ್ಬರಿಗೂ ವೆಂಟಿಲೇಟರ್‌ನಲ್ಲೇ ಚಿಕಿತ್ಸೆ ಮುಂದುವರಿದಿದೆ ಎಂದು ಡಿಎಚ್‌ಓ ವಿವರಿಸಿದರು.
74 ನೆಗೆಟಿವ್: ಸೋಮವಾರ 74 ಮಂದಿಯ ಗಂಟಲು ದ್ರವ ಮಾದರಿ ನೆಗೆಟಿವ್ ಆಗಿ ಬಂದಿದೆ. ಅಲ್ಲದೇ ಇಂದು ಇನ್ನೂ ಒಟ್ಟು 35 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ.