ಗಡಿಯಲ್ಲಿ ಸಿಲುಕಿದ 31 ಪ್ರಯಾಣಿಕರು ಜಿಲ್ಲೆಗೆ: ಗ್ರೀನ್ ಸಿಗ್ನಲ್
ಉಡುಪಿ: ನಿಪ್ಪಾಣಿ ಗಡಿಯಲ್ಲಿ ಕಳೆದ ಎರಡು ದಿನಗಳಿಂದ ಉಡುಪಿಗೆ ಬರಲು ಆಗದೇ ಅತಂತ್ರ ಸ್ಥಿತಿಯಲ್ಲಿದ್ದ 31 ಜನರನ್ನು ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಡುಪಿಗೆ ಕರೆತರಲು ಗ್ರೀನ್ ಸಿಗ್ನನಲ್ ನೀಡಿದ್ದಾರೆ.
ಬೆಳಗಾವಿಯ ನಿಪ್ಪಾಣಿಯಲ್ಲಿ ಅತಂತ್ರ ಸ್ಥಿತಿಯಲ್ಲಿ ಕಾಯುತ್ತಾ ನಿಂತಿರುವ ಗರ್ಭಿಣಿ ಮಹಿಳೆಯರು, ಮಕ್ಕಳ ಸಹಿತ ಕರಾವಳಿ ಜಿಲ್ಲೆಯ ಜನರಿಗೆ ರಾಜ್ಯಕ್ಕೆ ಪ್ರವೇಶ ನೀಡಲು ಸರ್ಕಾರ ಅನುಮತಿ ನೀಡಿದೆ. ಮಾನವೀಯತೆ ಮೆರೆದ ಮುಖ್ಯಮಂತ್ರಿಯವರಿಗೆ ಕೋಟ ಶ್ರೀನಿವಾಸ ಪೂಜಾರಿ ಟ್ವಿಟರ್‌ನಲ್ಲಿ ಧನ್ಯವಾದ ಹೇಳಿದ್ದಾರೆ.
ಮೇ 18 ರಂದು ಮುಂಬೈಯಿಂದ ಖಾಸಗಿ ಬಸ್ಸಿನಲ್ಲಿ 31ಪ್ರಯಾಣಿಕರು ಉಡುಪಿಗೆ ಹೊರಟಿದ್ದರು. ಬಸ್ ಮಾಲಕರು ಕೇವಲ ಮುಂಬೈಯ ಜಿಲ್ಲಾಡಳಿತದಿಂದ ಪಾಸ್ ಪಡೆದುಕೊಂಡಿದ್ದರು. ಅಲ್ಲಿನ ಜಿಲ್ಲಾಡಳಿತ ಉಡುಪಿ ಜಿಲ್ಲೆಗೆ ತಲುಪಲು ಮೊಬೈಲ್ನಲ್ಲಿ ಪಾಸ್ ರವನಿಸುವುದಗಿ ಹೇಳಿತ್ತು.ಇದನ್ನು ನಂಬಿದ ಎಲ್ಲಾ ಪ್ರಯಾಣಿಕರು ಬಸ್ಸಿನಲ್ಲಿ ಉಡುಪಿಗೆ ಪ್ರಯಾಣಿಸಿದರು. ಆದರೆ ಕರ್ನಾಟಕ ಗಡಿಯಾದ ನಿಪ್ಪಾಣಿಯಲ್ಲಿ ಇವರ ಬಸ್ಸನ್ನು ತಡೆಹಿಡಿಯಲಾಗಿತ್ತು. ಕಾರಣ ಇವರಲ್ಲಿ ಕರ್ನಾಟಕ ರಾಜ್ಯಕ್ಕೆ ಬರುವ ಯಾವುದೇ ಪಾಸ್ ಇಲ್ಲ. ಈ ಪ್ರಯಾಣಿಕರಲ್ಲಿ ಓರ್ವರು ಗರ್ಭಿಣಿ, ಮಕ್ಕಳು, ವೃದ್ಧರು ಇದ್ದರು .
ಈ ಬಗ್ಗೆ ಮೊದಲು “ಉಡುಪಿ ಟೈಮ್ಸ್” ವರದಿ ಮಾಡಿ, ಜಿಲ್ಲಾಡಳಿತ ಮತ್ತು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತರಲಾಯಿತು.