ಹಿರಿಯಡ್ಕ: ಸಮಾಜ ಸೇವಕ ಸುಧಾಕರ್ ಶೆಟ್ಟಿ ಮಟ್ಟಿಬೈಲು ನಿಧನ
ಹಿರಿಯಡ್ಕ: ಇಲ್ಲಿನ ಪುತ್ತಿಗೆ ನಿವಾಸಿ, ಸಮಾಜ ಸೇವಕರಾದ ಸುಧಾಕರ್ ಶೆಟ್ಟಿ ಮಟ್ಟಿ ಬೈಲು (56) ಅಲ್ಪಕಾಲದ ಅಸೌಖ್ಯದಿಂದ ಜೂನ್ 19ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಸಾಮಾಜಿಕ ಚಟುವಟಿಕೆ, ಹಾಗೂ ಈ ಹಿಂದೆ ಪುತ್ತಿಗೆ ಸೇತುವೆ ಉಳಿಸುವಲ್ಲಿ ಹೋರಾಟದಲ್ಲಿ ಮುಂಚೂಣಿಯಲ್ಲಿ ಭಾಗವಸಿದ್ದರು. ಧಾರ್ಮಿಕ ಕಾರ್ಯಕ್ರಮವಾದ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಸಾವಿರಾರು ಕದಿರು, ತಾವೇ ಗದ್ದೆಯಲ್ಲಿ ಫಸಲು ಬೆಳೆಸಿ ದೇವಸ್ಥಾನಕ್ಕೆ ನೀಡಿ ಸೇವೆಗೈಯ್ಯುತ್ತಿದ್ದರು.
ಮೃತರು ಪತ್ನಿ, ಹಾಗೂ ಪುತ್ರನನ್ನು ಅಗಲಿದ್ದಾರೆ, ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡ ಅವರು ಇತ್ತೀಚೆಗೆ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಪರ್ಕಳ ಶಾಮರಾಯ ಸರ್ಕಲ್ ಬಳಿ ಕಟ್ಟಿಗೆ ಡಿಪೋ ಮತ್ತು ಫರ್ನಿಚರ್ ಅಂಗಡಿ ಹೊಂದಿದ್ದರು.