ಅಗಲಿದ ಕ್ರೀಡಾ ತಾರೆಗೆ ನಮನ: ಸಕಲ ಸರ್ಕಾರಿ ಗೌರವಗಳೊಂದಿಗೆ ಮಿಲ್ಕಾ ಸಿಂಗ್ ಅಂತ್ಯಕ್ರಿಯೆ

ಚಂಡೀಘರ್: ನಿನ್ನೆ ತಡರಾತ್ರಿ ನಿಧನರಾದ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.

91 ರ ಹರೆಯದ ಮಿಲ್ಖಾ ಅವರ ಕುಟುಂಬ ಸದಸ್ಯರು ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಚಂಡೀಘರ್ ನಲ್ಲಿ ಅಂತ್ಯಕ್ರಿಯೆ ವಿಧಿ ವಿಧಾನಗಳು ನೆರವೇರಿದೆ. ‘ಫ್ಲೈಯಿಂಗ್ ಸಿಖ್’ ಎಂದು ಎಲ್ಲರಿಂದ ಕರೆಸಿಕೊಳ್ಳುತ್ತಿದ್ದ ಮಿಲ್ಕಾ ಸಿಂಗ್ ಕೊರೋನಾ ಸಂಬಂಧಿತ ಸೋಂಕಿನಿಂದ ನಿಧನವಾಗಿದ್ದಾರೆ.

ಅವರ ಮಗ ಮತ್ತು ಶ್ರೇಷ್ಠ  ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.

ಪಂಜಾಬ್ ರಾಜ್ಯಪಾಲರು ಮತ್ತು ಚಂಡೀಘರ್  ಆಡಳಿತಾಧಿಕಾರಿ ವಿ ಪಿ ಸಿಂಗ್ ಬದ್ನೋರ್, ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ ಅವರುಈ ವೇಳೆ ಹಾಜರಿದ್ದರು.

ಕ್ರೀಡಾಪಟುವನ್ನು ಗೌರವಿಸುವ ಸಂಕೇತವಾಗಿ ಪಂಜಾಬ್ ಸರ್ಕಾರ ಒಂದು ದಿನದ ಶೋಕಾಚರಣೆ ಮತ್ತು ರಜಾದಿನವನ್ನು ಘೋಷಿಸಿತ್ತು

Leave a Reply

Your email address will not be published. Required fields are marked *

error: Content is protected !!