ಉಡುಪಿ: ಭಾರೀ ಮಳೆಗೆ ಮಠದಬೆಟ್ಟು ಸೇತುವೆ ಕುಸಿತ

ಉಡುಪಿ ಜೂ.19(ಉಡುಪಿ ಟೈಮ್ಸ್ ವರದಿ): ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲ್ಸOಕ ತುಂಬಿ ಹರಿಯುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಮಠದಬೆಟ್ಟು, ಕೊಪ್ಪರ ತೋಟಕ್ಕೆ ಸಂಪರ್ಕಿಸುವ ಕಾಲು ಸೇತುವೆಯ ಒಂದು ಬದಿ ಕುಸಿದಿದೆ. 

ಇದೀಗ ಸೇತುವೆಯ ಒಂದು ಭಾಗ ಕುಸಿದಿರುವುದರಿಂದ ಈ ಭಾಗದ ಜನರಿಗೆ ಸಂಪರ್ಕ ಕಡಿತಗೊಂಡಿದೆ. ಈ ಕಾಲು ಸೇತುವೆ ಹಲವು ಸಮಯಗಳಿಂದ‌ ಶಿಥಿಲಗೊಂಡಿತ್ತು ಎಂದು ಹೇಳಲಾಗುತ್ತಿದ್ದು, ನಿರಂತರ ಮಳೆ ಸುರಿಯುತ್ತಿರುವುದರಿಂದ ಇಂದು ಮಧ್ಯಾಹ್ನ ಕಾಲು ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ.

ಸ್ಥಳೀಯ ಯುವಕರು ತಾತ್ಕಲಿಕವಾಗಿ ಮರದ ದಿಮ್ಮಿಗಳನ್ನು ಹಾಕಿ ಸೇತುವೆ ಸರಿಪಡಿಸಲು ಹರಸಹಾಸ ಪಟ್ಟಿದ್ದಾರೆ. ಸ್ಥಳೀಯರು ಹಲವು ವರುಷಗಳಿಂದ ಇಲ್ಲೊಂದು ಸೇತುವೆ ನಿರ್ಮಿಸಿ ಕೊಡಲು ಮನವಿ ಸಲ್ಲಿಸಿದರೂ ಕೂಡ ಜನಪ್ರತಿನಿಧಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಇದ್ದ ಕಾಲು ಸೇತುವೆ ಕೂಡ ಕುಸಿದು ಬಿದ್ದಿರು ವುದರಿಂದ ಮಳೆಗಾಲದಲ್ಲಿ‌ ಇಲ್ಲಿನ ಜನರು ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

Leave a Reply

Your email address will not be published. Required fields are marked *

error: Content is protected !!