ಉಡುಪಿ: ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯ ನೇಮಕಾತಿ ಪರೀಕ್ಷೆ ಬರೆದ ನಕಲಿ ಅಭ್ಯರ್ಥಿ
ಉಡುಪಿ ಜೂ.19(ಉಡುಪಿ ಟೈಮ್ಸ್ ವರದಿ): ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಸಲಿ ಅಭ್ಯರ್ಥಿಯ ಬದಲಿಗೆ ನಕಲಿ ವ್ಯಕ್ತಿಯೊಬ್ಬ ಪರೀಕ್ಷೆ ಬರೆದಿರುವ ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
2020ರ ಡಿ.18 ರಂದು ಉಡುಪಿ ಜಿಲ್ಲೆಯ ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಜಾರಿ ಇಂಗ್ಲೀಷ್ ಮೀಡಿಯಾಂ ಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಪ್ರವೀಣ್ ಖೋಟ್ ಎಂಬಾತನ ಬದಲಿಗೆ ಇನ್ನೊಬ್ಬ ವ್ಯಕ್ತಿಯು ಲಿಖಿತ ಪರೀಕ್ಷೆ ಬರೆದಿದ್ದಾನೆ.
ಆ ಬಳಿಕ 2020ರ ಡಿ.19 ರಂದು ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಮತ್ತು 2021ರ ಜ.13 ರಂದು ನಡೆದ ವೈಧ್ಯಕೀಯ ಪರೀಕ್ಷೆಯಲ್ಲಿ ಪ್ರವೀಣ್ ಖೋಟ್ ಹಾಜರಾಗಿದ್ದು ಈ ಬಗ್ಗೆ ವಿಚಾರಣೆ ನಡೆಸಿ ಬೆಂಗಳೂರಿನ ಬೆರಳು ಮುದ್ರೆಯನ್ನು ಸಂಗ್ರಹಾಲಯ ನೀಡಿರುವ ಅಭಿಪ್ರಾಯ ವರದಿಯಲ್ಲಿ 2020ರ ಡಿ.18 ರಂದು ಸಂತೆಕಟ್ಟೆಯಲ್ಲಿ ಇರುವ ಮೌಂಟ್ ರೋಜಾರಿ ಇಂಗ್ಲೀಷ್ ಮೀಡಿಯಾಂ ಶಾಲೆಯಲ್ಲಿ ನಡೆದಿರುವ ಲಿಖಿತ ಪರೀಕ್ಷೆಯಲ್ಲಿ ಹಾಜರಾಗಿರುವ ಪ್ರವೀಣ್ ಖೋಟ್ ಎಂಬಾತನ ಹೆಬ್ಬೆಟ್ಟಿನ ಬೆರಳು ಮುದ್ರೆ ಹಾಗೂ ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಹಾಗೂ ವೈಧ್ಯಕೀಯ ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಯ ಹೆಬ್ಬೆಟ್ಟಿನ ಬೆರಳು ಮುದ್ರೆ ಹೊಂದಾಣಿಕೆ ಅಗದೆ ಇರುವುದು ಕಂಡು ಬಂದಿರುತ್ತದೆ. ಅದರಂತೆ ಆರೋಪಿ ಪ್ರವೀಣ್ ಖೋಟ್ ಹಾಗೂ ಆರೋಪಿ ಇನ್ನೊಬ್ಬ ವ್ಯಕ್ತಿ, ಪೊಲೀಸ್ ನೇಮಕಾತಿ ಹೊಂದುವ ಉದ್ದೇಶದಿಂದ, 2ನೇ ಆರೋಪಿಯು ತಾನು ಪ್ರವೀಣ್ ಖೋಟ್ ಅಲ್ಲದೇ ಇದ್ದರೂ ಆತನಂತೆ ನಟಿಸಿ ಕಲ್ಯಾಣಪುರ ಸಂತೆಕಟ್ಟೆಯ ಶಾಲೆಯಲ್ಲಿ ನಡೆದ ಪೊಲೀಸ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಹಾಜರಾಗಿದ್ದು, ಆ ಬಳಿಕ ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಹಾಗೂ ವೈಧ್ಯಕೀಯ ಪರೀಕ್ಷೆಯಲ್ಲಿ 1ನೇ ಆರೋಪಿ ಪ್ರವೀಣ್ ಖೋಟ್ ಹಾಜರಾಗಿ, ವಂಚನೆಯನ್ನು ನಡೆಸಿರುವುದಾಗಿ, ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.