ವಿಶ್ವ ನಾಯಕರ ಸಮೀಕ್ಷೆ: 13 ದೇಶಗಳ ನಾಯಕರಿಗಿಂತಲೂ ಪ್ರಧಾನಿ ಮೋದಿ ಅಗ್ರಗಣ್ಯ

ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೇ.66ರಷ್ಟು ಜನರು ಅನುಮೋದಿಸಿದ್ದಾರೆ ಎಂದು ವಿಶ್ವದ  ನಾಯಕರ ಬಗ್ಗೆ ಸಮೀಕ್ಷೆ ನಡೆಸಿರುವ ಅಮೆರಿಕಾ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ತಿಳಿಸಿದೆ.

2019 ರ ಆಗಸ್ಟ್ ನಲ್ಲಿ ಮೋದಿ ಅವರನ್ನು ಶೇ.82 ರಷ್ಟು ಮಂದಿ  ಅಂಗೀಕರಿಸಿದ್ದರು. ಈಗ ಸುಮಾರು 20 ರಷ್ಟು ಪಾಯಿಂಟ್  ಕಡಿಮೆಯಾಗಿದೆ. ಆದರೂ, ಇತರ ಪ್ರಪಂಚ ನಾಯಕರಿಗಿಂತ ಮೋದಿ ಮುಂದಿದ್ದಾರೆ.

ಅಮೇರಿಕನ್ ಡಾಟಾ ಇಂಟೆಲಿಜೆನ್ಸ್ ಏಜೆನ್ಸಿ ‘ಮಾರ್ನಿಂಗ್ ಕನ್ಸಲ್ಟ್’  ಅನೇಕ ದೇಶಗಳ ಆಡಳಿತ ನಡೆಸುವ ನಾಯಕರ ಕುರಿತ ಸಾರ್ವಜನಿಕರು ಹೊಂದಿರುವ ಅಭಿಪ್ರಾಯ ಪತ್ತೆ ಮಾಡುತ್ತದೆ.  ಗುಪ್ತಚರ ಸಂಸ್ಥೆಗಳ ಮೂಲಕ ರಾಜಕೀಯ ಮಾಹಿತಿ ಸಂಗ್ರಹಿಸಿ ಕ್ರೋಡೀಕರಿಸುತ್ತದೆ.

2019 ಆಗಸ್ಟ್ ನಲ್ಲಿ ಜಮ್ಮು ಕಾಶ್ಮೀರದ ಸಂವಿಧಾನ ವಿಧಿ 370 ಅನ್ನು ರದ್ದುಪಡಿಸಿದಾಗ, ಅವರ ಅನುಮೋದನೆ ರೇಟಿಂಗ್ ಶೇಕಡಾ 82 ಆಗಿತ್ತು. ಕೇವಲ ಶೇ.11ರಷ್ಟು ಮಂದಿ ಮಾತ್ರ ಅವರನ್ನು ವಿರೋಧಿಸಿದ್ದರು. ಈ ಜೂನ್ ವೇಳೆಗೆ, ರೇಟಿಂಗ್ ಶೇ.66 ಕ್ಕೆ ಇಳಿದಿದೆ.  ಶೇ.28 ರಷ್ಟು ಮಂದಿ ನಿರಾಕರಿಸಿದ್ದಾರೆ. ಆದರೆ, ಅಮೆರಿಕಾ, ಯುಕೆ, ರಷ್ಯಾ, ಕೆನಡಾ, ಬ್ರೆಜಿಲ್, ಫ್ರಾನ್ಸ್ ಹಾಗೂ ಜರ್ಮನಿ           ಸೇರಿದಂತೆ 13 ದೇಶಗಳಲ್ಲಿ ವಿಶ್ವ ನಾಯಕರಿಗಿಂತಲೂ ಮೋದಿ ಮುಂದಿದ್ದಾರೆ ಎಂದು ಮಾರ್ನಿಂಗ್ ಕನ್ಸಲ್ಟ್ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಅಮೆರಿಕಾ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಜೋ ಬೈಡನ್, ಶೇ.53 ರಷ್ಟು ರೇಟಿಂಗ್ ಹೊಂದಿದ್ದಾರೆ. ಈ 13 ದೇಶಗಳ ಪೈಕಿ  ಜಪಾನಿನ ಪ್ರಧಾನಿ ಯೋಶಿಹಿಡೆ ಸುಗಾ ಕೇವಲ ಶೇ. 29 ರೇಟಿಂಗ್ ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!