ಮಂಗಳೂರು: ಜೂ.19-20ರಂದು ವೀಕೆಂಡ್ ಕರ್ಫ್ಯೂ ಇಲ್ಲ
ಮಂಗಳೂರು: ಜಿಲ್ಲೆಯಲ್ಲಿ ಜೂನ್ 19 ಹಾಗೂ 20ರಂದು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿಲ್ಲ. ಪ್ರಸ್ತುತ ಇರುವ ಲಾಕ್ ಡೌನ್ ಸೋಮವಾರದ ತನಕ ಮುಂದುವರೆಯಲಿದೆ. ಸೋಮವಾರದ ನಂತರ ಸೋಂಕಿನ ಪ್ರಮಾಣದ ಬಗ್ಗೆ ಚರ್ಚೆ ನಡೆಸಿ ಜಿಲ್ಲಾಡಳಿತ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ರಾತ್ರಿಯಿಂದ ಸೋಮವಾರ ಬೆಳಿಗ್ಗಿನ ತನಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಿರುವುದರಿಂದ ಮOಗಳೂರಿನ ಜನತೆಯಲ್ಲಿ ಸಾಕಷ್ಟು ಗೊಂದಲ ಏರ್ಪಟ್ಟಿತ್ತು. ಇದಕ್ಕೆಲ್ಲ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.
ಶನಿವಾರ ಹಾಗೂ ರವಿವಾರ ಇಲ್ಲಿಯ ತನಕ ಇರುವ ಆದೇಶದ ಪ್ರಕಾರ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯ ತನಕ ಅಗತ್ಯ ಸೇವೆಗಳು ಲಭ್ಯವಿದೆOದು ಸ್ಪಷ್ಟನೆ ನೀಡಿದೆ.