ಸಮುದ್ರದಲ್ಲಿ ಭಾರೀ ಪ್ರಮಾಣದ ತೈಲ ಸೋರಿಕೆ

ಹೊಸದಿಲ್ಲಿ ಜೂ.18: ಚೆನ್ನೈ ಬಳಿ ಸಮುದ್ರದಲ್ಲಿ ಭಾರೀ ಪ್ರಮಾಣದ ತೈಲ ಸೋರಿಕೆಯಾಗಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ. ಪೋರ್ಚುಗಲ್ ಧ್ವಜ ಹೊಂದಿದ್ದ ಕಂಟೈನರ್ ಹಡಗು ಎಂವಿ ಡೆವೋನ್‌ನಿಂದ ಸುಮಾರು 10 ಸಾವಿರ ಲೀಟರ್ ತೈಲ ಸೋರಿಕೆಯಾಗಿದೆ.

ಸೋರಿಕೆ ತಡೆ ಕ್ರಮಗಳನ್ನು ಕೈಗೊಳ್ಳುವ ವೇಳೆಗಾಗಲೇ 10 ಸಾವಿರ ಲೀಟರ್‌ನಷ್ಟು ತೈಲ ಸಮುದ್ರಕ್ಕೆ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಉಳಿದ ತೈಲವನ್ನು ಹಡಗಿನ ಸಿಬ್ಬಂದಿಯ ನೆರವಿನೊಂದಿಗೆ ಬೇರೆ ಟ್ಯಾಂಕ್‌ಗೆ ವರ್ಗಾಯಿಸಲಾಯಿತು ಎಂದು ಉನ್ನತ ಮೂಲಗಳು ತಿಳಿಸಿ.

ಚೆನ್ನೈನಿಂದ ಆಗ್ನೇಯಕ್ಕೆ ಸುಮಾರು 450 ಕಿಲೋಮೀಟರ್ ದೂರದಲ್ಲಿ ಸಮುದ್ರಮಧ್ಯದಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾ ಗುತ್ತಿದ್ದು. ಕಂಟೈನರ್‌ನಲ್ಲಿ 120 ಸಾವಿರ ಲೀಟರ್ ತೈಲ ಸಾಗಿಸುತ್ತಿದ್ದ ಈ ಹಡಗು ಕೊಲಂಬೊದಿಂದ ಪಶ್ಚಿಮ ಬಂಗಾಳದ ಹಲ್ದಿಯಾಗೆ ಹೋಗುತ್ತಿತ್ತು ಎನ್ನಲಾಗಿದೆ. ಈ ಹಡಗಿನ ಮೂಲಕ 382 ಕಂಟೈನರ್‌ಗಳಲ್ಲಿ 10795 ಟನ್ ಸರಕು ಸಾಗಿಸಲಾಗುತ್ತಿತ್ತು. ಐಜಿಸಿ, ಎಂವಿ ಡೆವೋನ್ ಜತೆ ನಿರಂತರ ಸಂಪರ್ಕದಲ್ಲಿದ್ದು, ಹಡಗು ಈಗ ಸುಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!