ಉಡುಪಿ: ಸಮುದ್ರದಲ್ಲಿ ಬಲವಾದ ಗಾಳಿ- ಹವಾಮಾನ ಇಲಾಖೆ ಎಚ್ಚರಿಕೆ
ಉಡುಪಿ ಜೂ.17(ಉಡುಪಿ ಟೈಮ್ಸ್ ವರದಿ): ಕರಾವಳಿಯುದ್ದಕ್ಕೂ ಸಮುದ್ರದ ಮೇಲ್ಮೈಯಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರದಲ್ಲಿ ಪ್ರತೀ ಗಂಟೆ ಗೆ 40 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಜೂ.17 ರಿಂದ ಜೂ.18 ರ ವರೆಗೆ ಕರಾವಳಿಯ ಮಂಗಳೂರಿನಿಂದ ಕಾರವಾರದ ವರೆಗೆ 3 ರಿಂದ 4.6 ಮೀಟರ್ ವ್ಯಾಪ್ತಿಯಲ್ಲಿ ಸೆಕೆಂಡಿಗೆ 38 ರಿಂದ 47 ಸೆ.ಮೀ ವೇಗದಲ್ಲಿ ಮುಂದಿನ 24 ಗಂಟೆಗಳ ವರೆಗೆ ಬಲವಾದ ಗಾಳಿ ಬೀಸಲಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕರಾವಳಿಯಲ್ಲಿ ಯಾವುದೇ ಮೀನುಗಾರರು ಸಮುದ್ರಕ್ಕೆ ಇಳಿಯದೇ ಸುರಕ್ಷಿತರಾಗಿರುವಂತೆ ಸೂಚನೆ ನೀಡಲಾಗಿದೆ.