ಗುಣಮಟ್ಟ ಕೊರತೆ ಹಿನ್ನೆಲೆಯಲ್ಲಿ 11 ಔಷಧ ನಿಷೇಧ!
ಬೆಂಗಳೂರು ಜೂ.17(ಉಡುಪಿ ಟೈಮ್ಸ್ ವರದಿ): ಯಾರಾದರೂ ಅನಾರೋಗ್ಯದ ಸಂದರ್ಭದಲ್ಲಿ ಗುಣಮಟ್ಟದ ಕೊರತೆ ಇರುವಂತಹ ಔಷಧಿಗಳನ್ನು ಸೇವಿಸಿದಲ್ಲಿ ಅಂತಹವರ ಆರೋಗ್ಯ ಸುಧಾರಿಸುವುದುಕ್ಕಿಂತ ಬಿಗಡಾಯಿಸುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿ ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯವು ಕಾಂತಿವರ್ಧಕ ಮತ್ತು ಗುಣಮಟ್ಟ ಕೊರತೆ ಹಿನ್ನೆಲೆಯಲ್ಲಿ 11 ಔಷಧಗಳನ್ನು ನಿಷೇಧಿಸಿದೆ.
ಈ ಬಗ್ಗೆ ನಿರ್ದೇಶನ ನೀಡಿರುವ ಔಷಧ ನಿಯಂತ್ರಕರು, ಈ ಔಷಧ ಗಳನ್ನು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ನವರು ದಾಸ್ತಾನು ಮಾಡುವುದು ಅಥವಾ ಮಾರಾಟ ಮಾಡಬಾರದು ಎಂದು ತಿಳಿಸಿದ್ದಾರೆ. ಒಂದು ವೇಳೆ ಇಂತಹ ಔಷಧಗಳನ್ನು ದಾಸ್ತಾನು ಹೊಂದಿದ್ದಲ್ಲಿ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ.
ನಿಷೇಧಿತ 11 ಔಷಧಿಗಳು ಇಂತಿವೆ
ಕೂಲ್ 24 (ಪ್ಯಾಂಟೋಪ್ರಜೋಲ್ ಗ್ಯಾಸ್ಟ್ರೋ-ರಿಸಿಸ್ಟೆಂಟ್ ಟ್ಯಾಬ್ಲೆಟ್ ಐ.ಪಿ)
ಟ್ರೋಯ್ಟಾಡ್ಡ್ ಸಿರಪ್ (ಸೆಪೋಡ್ಯಾಕ್ಸಿಮ್ ಪ್ರೋಕ್ಸಿಟಿಲ್ ಓರಲ್ ಸಸ್ಪೆನ್ಶನ್ ಐ.ಪಿ)
ಟ್ವೀಟ್ ಕಾಲ್-500 (ಕ್ಯಾಲ್ಸಿಯಂ, ಮೆಗ್ನಿಷಿಯಂ, ಜಿಂಕ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್)
ಟ್ರೂ ಎಸ್-ಸ್ಪಾಸ್ (ಅಸೆಕ್ರೋಫೆನಕ್ ಡ್ರೋಟವೆರಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್)
ಎಡೋಕ್ಲೋಪ್ -ಪಿ (ಅಸೇಕ್ಲೋಫೆನಕ್ ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್)
ರ್ಯಾಬ್ವೆಬ್-ಡಿಎಸ್ ಆರ್ ( ಸೋಡಿಯಂಗ್ಯಾಸ್ಟ್ರೋ -ರಿಸಿಸ್ಟೆಂಟ್ ಆ್ಯಂಡ್ ಡೆಮ್ಫೆರಿಡನ್ ಪ್ರೋಲಾಂಗಡ್ರೀಲಿಸ್ ಕ್ಯಾಪ್ಸೂಲ್)
ಎರಿಥೋಮೈಸಿನ್ ಸ್ಟಿರೆಟ್ ಟ್ಯಾಬ್ಲೆಟ್ ಐ.ಪಿ 500 ಎಮ್ಜಿ (ಎರಾಕ್ಸಿಡ್-500)
ಅಮೋಕ್ಸಿಸಿಲಿನ್ ಕ್ಲವುಲಾನಿಕ್ ಆ್ಯಸಿಡ್ ವಿಥ್ ಲ್ಯಾಕ್ಟಿಕ್ ಆಸಿಡ್ ಬ್ಯಾಸಿಲಸ್ ಟ್ಯಾಬ್ಲೆಟ್ಸ್ (ಓರಿಕ್ಲೇವ್-625 ಎಲ್ ಬಿ)
ಪ್ಯಾರಸಿಟಮೋಲ್ ಇನ್ ಪೋಶನ್ ಐಪಿ
ಕ್ರಿಟ್ ಪಾರ್
ರೋಲ್ಡ್ ಬ್ಯಾಂಡೇಜ್ ಶೆಡ್ಯೂಲ್‌ಏಪ್.