ಕೊಡವೂರು: ವಿದ್ಯುತ್ ಶಾಕ್ ತಗುಲಿ ಯುವಕ ಮೃತ್ಯು
ಕಾಪು: ವಿದ್ಯುತ್ ಆಘಾತಕ್ಕೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ಉದ್ಯಾವರ ಕನಕೋಡದಲ್ಲಿ ಬುಧವಾರ ಸಂಜೆ ನಡೆದಿದೆ.
ಮಲ್ಪೆ ಕೊಡವೂರು ನಿವಾಸಿ ಮನೋಜ್ ಕರ್ಕೇರ ಮತ್ತು ಶಶಿಕಲಾ ದಂಪತಿಯ ಪುತ್ರ ಮೋಕ್ಷಿತ್ ಕರ್ಕೇರ (25) ಮೃತ ದುರ್ದೈವಿ.
ಬುಧವಾರ ಸಂಜೆ ಉದ್ಯಾವರ ಕನಕೋಡದಲ್ಲಿ ಆತನ ಚಿಕ್ಕಪ್ಪ ಶಂಕರ ಎಂಬವರ ಮನೆಯಲ್ಲಿದ್ದಾಗ ಜೋರಾಗಿ ಬೀಸಿದ ಗಾಳಿ ಮಳೆಗೆ ವಿದ್ಯುತ್ ಕೈ ಕೊಟ್ಟಿದ್ದು, ಅದನ್ನು ಕಂಡು ಮೈನ್ ಸ್ವಿಚ್ ಬೋರ್ಡ್ ಪರಿಶೀಲನೆ ನಡೆಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ವಿದ್ಯುತ್ ಶಾಕ್ ನಿಂದ ಗಂಭೀರಗೊಂಡ ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ತಾಯಿಯೊಂದಿಗೆ ಮಲ್ಪೆಯಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದು, ಬಿಡುವಿನ ಸಮಯದಲ್ಲಿ ಮೆಕ್ಯಾನಿಕ್, ಮದುವೆಯ ಸಭಾಂಗಣ, ಮನೆಗಳ ಡೆಕೊರೆೇಟ್ ವೃತ್ತಿಯನ್ನು ಮಾಡುತ್ತಿದ್ದರು.