ಗ್ರಾಮೀಣ ಕಾಂಗ್ರೆಸ್ ಮಾಜಿ ಪ್ರ.ಕಾರ್ಯದರ್ಶಿ ಕಪ್ಪೆಟ್ಟು ವಿಠಲಕಾವ ನಿಧನ
ಉಡುಪಿ ಜೂ.16(ಉಡುಪಿ ಟೈಮ್ಸ್ ವರದಿ):ಕಪ್ಪೆಟ್ಟು ಗ್ರಾಮೀಣ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ವಿಠಲಕಾವ ಅವರು ಇಂದು ಅಸೌಖ್ಯದಿಂದ ನಿಧನರಾಗಿದ್ದಾರೆ.
1955ರ ಎಪ್ರಿಲ್ 21 ರಂದು ಜನಿಸಿದ ಇವರು, ಉಡುಪಿ ಕರ್ನಾಟಕ ಕಾಂಗ್ರೆಸ್ ಪಕ್ಷ, ಕರ್ನಾಟಕ ವಿಕಾಸ ಪಕ್ಷ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಪಕ್ಷದಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಇವರು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಇವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.