ಕೋವಿಡ್ ಸಂಕಷ್ಟದಲ್ಲಿ ನೆರವಾದ ಉದ್ಯೋಗ ಖಾತರಿ ಯೋಜನೆ: 955.36 ಲಕ್ಷ ಕೂಲಿ ಪಾವತಿ

ಉಡುಪಿ: ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಸರ್ಕಾರ ವಿಧಿಸಿದ ಹಲವು ನಿರ್ಭಂದಗಳಿ0ದ, ದೈನಂದಿನ ಸಂಪಾದನೆಯನ್ನು ನಂಬಿಕೊ0ಡಿದ್ದ ಅಸಂಖ್ಯಾತ ಕೂಲಿ ಕಾರ್ಮಿಕರಿಗೆ, ಜೀವನ ನಿರ್ವಹಣೆಗೆ ತೊಂದರೆಗಳಾದವು, ಆದರೆ ಈ ಸಮಯದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಒದಗಿಸುವ ಮೂಲಕ ಅವರ ಮೊಗದಲ್ಲಿ ಸಂತಸ ಮೂಡಿಸಿದೆ.

ಜಿಲ್ಲೆಯಲ್ಲಿ ಕೊರೊನಾ ಕಾರಣದಿ0ದ ಸಾಕಷ್ಟು ಕಾರ್ಮಿಕರು, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಆತ0ಕದಲ್ಲಿದ್ದು, ಹೆಚ್ಚಿನ
ಯುವಕರು ಮನೆಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಗ್ರಾಮೀಣ ಭಾಗದ ಜನರನ್ನು ಹಾಗೂ ಊರು ಸೇರಿರುವ ನಗರವಾಸಿಗಳಿಗೆ ಮಹಾತ್ಮಗಾ0ಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಉದ್ಯೋಗ ಭಾಗ್ಯ ಕರುಣಿಸಿದೆ. ಕೊರೊನಾ ಲಾಕ್ಡೌನ್ ಸ0ದರ್ಭದಲ್ಲಿ ತೊ0ದರೆಗೊಳಗಾದ, ಜಿಲ್ಲೆಯ ಕೂಲಿ ಕಾರ್ಮಿಕರಿಗೆ, ಒಟ್ಟು 10,632 ಕುಟು0ಬಗಳ 18,503 ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವನ್ನು ಒದಗಿಸಲಾಗಿದ್ದು, 3046 ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ, 955.36 ಲಕ್ಷ ರೂ ಗಳನ್ನು ಕೂಲಿ ಹಾಗೂ 203.04 ಲಕ್ಷ ರೂ ಗಳನ್ನು ಸಾಮಗ್ರಿ ಖರೀದಿಗಾಗಿ ವೆಚ್ಚ ಮಾಡಲಾಗಿದೆ. 103 ಕೆರೆ ಹೂಳೆತ್ತುವ ಕಾಮಗಾರಿ,152 ತೋಡು ಹೂಳೆತ್ತುವ ಕಾಮಗಾರಿ, 982 ನೀರಾವರಿ ಬಾವಿ, 855 ಬಚ್ಚಲು ಗು0ಡಿ, 326 ದನದ ಕೊಟ್ಟಿಗೆ, 44 ಅಡಿಕೆ, ತೆ0ಗು, ಮಲ್ಲಿಗೆ ಮು0ತಾದ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಾಲಿನಲ್ಲಿ ಹೊಸದಾಗಿ 3213 ಕುಟು0ಬಗಳಿಗೆ ಉದ್ಯೋಗ ಚೀಟಿಯನ್ನು ವಿತರಿಸಲಾಗಿದೆ.

ಸ್ವ0ತ ಉದ್ಯೋಗ, ಸ್ವಾವಲ0ಬಿ ಬದುಕು ನಡೆಸಲು ಆಸಕ್ತಿ ಇರುವ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ವೈಯುಕ್ತಿಕ ಕಾಮಗಾರಿಗಳನ್ನು ಕೈಗೊ0ಡು ಸ್ವ0ತ ಬದುಕು ಕಟ್ಟಿಕೊಳ್ಳಲು ಅವಕಾಶವಿರುತ್ತದೆ. ಹೈನುಗಾರಿಕೆಯಡಿ ಆಸಕ್ತಿ ಇರುವವರು ದನದ ಹಟ್ಟಿ, ಕೋಳಿ, ಹ0ದಿ, ಆಡು, ಕುರಿ ಶೆಡ್ಡುಗಳನ್ನು ನಿರ್ಮಾಣ ಮಾಡಿಕೊಳ್ಳಲು ಯೋಜನೆಯಡಿ ಅವಕಾಶವಿರು ತ್ತದೆ. ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಅಡಿಕೆ,ತೆ0ಗು,ಗೇರು,ಕೋಕೋ,ಕರಿಮೆಣಸು,ಮಲ್ಲಿಗೆ,ಪೌಷ್ಟಿಕ ತೋಟ ನಿರ್ಮಾಣ ಮು0ತಾದ
ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿರುತ್ತದೆ. ಅಡಿಕೆ,ತೆ0ಗು ಪುನಶ್ಚೇತನ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ. ಕೃಷಿ ಪೂರಕವಾಗಿ ಎರೆಹುಳು ತೊಟ್ಟಿ, ನೀರಾವರಿ ಬಾವಿ, ಕೃಷಿ ಹೊ0ಡ ಕಾಮಗಾರಿಗಳಿಗೂ ಅವಕಾಶವಿರು ತ್ತದೆ. ರೈತರು ತಮ್ಮ ಜಮೀನಿನಲ್ಲಿ ಮಹಾಗನಿ, ಸಾಗುವಾನಿ, ಹಲಸು, ನೇರಳೆ, ಮಾವು, ಅತ್ತಿ, ನುಗ್ಗೆ ಮು0ತಾದ ಅರಣ್ಯ ಗಿಡಗಳನ್ನು ಬೆಳೆಸಲು ಅವಕಾಶವಿರುತ್ತದೆ. ಮನೆಯಲ್ಲಿ ಸ್ನಾನ ಮಾಡಿದ ನೀರು, ಪಾತ್ರೆ, ಬಟ್ಟೆ ತೊಳೆದ ನೀರನ್ನು ಬಿಡಲು ಬಚ್ಚಲು ಗು0ಡಿಯ ನ್ನು ನಿರ್ಮಿಸಲು ಯೋಜನೆಯಡಿ ಅವಕಾಶವಿರುತ್ತದೆ.ನೀರು ಸ0ರಕ್ಷಣೆಯನ್ನು ಕೈಗೊಳ್ಳಲು ರೈತರು ತಮ್ಮ ಕೊಳವೆಬಾವಿಗಳಿಗೆ ಜಲಮರುಪೂರಣ ಘಟಕಗಳನ್ನು ನಿರ್ಮಿಸಿಕೊಳ್ಳಲು ಕೂಡಾ ಅವಕಾಶ ಕಲ್ಪಿಸಲಾಗಿದೆ.

ಮಹಾತ್ಮಗಾ0ಧಿ ನರೇಗಾ ಯೋಜನೆಯ 2021-22ನೇ ಸಾಲಿನ ಅನುಷ್ಟಾನದಲ್ಲಿ ಉಡುಪಿ ಜಿಲ್ಲೆ ಗುರಿ ಮೀರಿ ಪ್ರಗತಿಯನ್ನು ಸಾಧಿಸಿದೆ. ಈ ಆರ್ಥಿಕ ಸಾಲಿನಲ್ಲಿ ಒಟ್ಟು 6.70 ಲಕ್ಷ ಮಾನವ ದಿನಗಳ ಗುರಿ ಇದ್ದು ಜೂನ್ ಅ0ತ್ಯಕ್ಕೆ 2.96 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ ಈಗಾಗಲೇ 3.26 ಲಕ್ಷ ಮಾನವ ದಿನಗಳನ್ನು ಸೃಜಿಸಿ 107.95 ಸಾಧನೆ ಮಾಡುವುದರ ಮೂಲಕ ಗುರಿ ಮೀರಿ ಸಾಧನೆ ಮಾಡುವತ್ತ ದಾಪುಗಾಲು ಇರಿಸಿದೆ. ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ.63.20 ರಷ್ಟು ಇದ್ದು,ಇದು ರಾಜ್ಯದಲ್ಲಿ ಗರಿಷ್ಟ ಪ್ರಮಾಣ ಎ0ಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್…

ಬ್ರಹ್ಮಾವರ ದಲ್ಲಿ ಜೂನ್ ಅಂತ್ಯಕ್ಕೆ 51,481 ಮಾನವ ದಿನ ಸೃಜನೆಯ ಗುರಿ ಇದ್ದು, 65,853 ಮಾನವದಿನಗಳನ್ನು ಸೃಜಿಸಿ 127.92 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 198.35 ಲಕ್ಷ ಕೂಲಿ ವೆಚ್ಚ ಹಾಗೂ 11.46 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ. ಬೈಂದೂರು ದಲ್ಲಿ ಜೂನ್ ಅಂತ್ಯಕ್ಕೆ 31,751 ಮಾನವ ದಿನ ಸೃಜನೆಯ ಗುರಿ ಇದ್ದು, 34,190 ಮಾನವದಿನಗಳನ್ನು ಸೃಜಿಸಿ 107.68 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 102.11 ಲಕ್ಷ ಕೂಲಿ ವೆಚ್ಚ ಹಾಗೂ 19.36 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ. ಹೆಬ್ರಿ ದಲ್ಲಿ ಜೂನ್ ಅಂತ್ಯಕ್ಕೆ 15,997 ಮಾನವ ದಿನ ಸೃಜನೆಯ ಗುರಿ ಇದ್ದು 14,584 ಮಾನವದಿನಗಳನ್ನು ಸೃಜಿಸಿ 91.17 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 44.84 ಲಕ್ಷ ಕೂಲಿ ವೆಚ್ಚ ಹಾಗೂ 15.51 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ. ಕಾಪುನಲ್ಲಿ ಜೂನ್ ಅಂತ್ಯಕ್ಕೆ 19,709 ಮಾನವ ದಿನ ಸೃಜನೆಯ ಗುರಿ ಇದ್ದು 30,849 ಮಾನವದಿನಗಳನ್ನು ಸೃಜಿಸಿ 156.52 ಸಾಧನೆ ಮಾಡಲಾಗಿ ದೆ. ಲಾಕ್ಡೌನ್ ಅವಧಿಯಲ್ಲಿ 92.88 ಲಕ್ಷ ಕೂಲಿ ವೆಚ್ಚ ಹಾಗೂ 24.07 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.

ಕಾರ್ಕಳ ದಲ್ಲಿ ಜೂನ್ ಅಂತ್ಯಕ್ಕೆ 40,213 ಮಾನವ ದಿನ ಸೃಜನೆಯ ಗುರಿ ಇದ್ದು 30,724 ಮಾನವದಿನಗಳನ್ನು ಸೃಜಿಸಿ 76.40
ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 90.15 ಲಕ್ಷ ಕೂಲಿ ವೆಚ್ಚ ಹಾಗೂ 42.91 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಕುಂದಾಪುರ ಜೂನ್ ಅಂತ್ಯಕ್ಕೆ 1,15,424 ಮಾನವ ದಿನ ಸೃಜನೆಯ ಗುರಿ ಇದ್ದು 1,23,811 ಮಾನವದಿನಗಳನ್ನು ಸೃಜಿಸಿ107.27 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 369.13 ಲಕ್ಷ ಕೂಲಿ ವೆಚ್ಚ ಹಾಗೂ 74.89 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ. ಉಡುಪಿ ಯಲ್ಲಿ ಜೂನ್ ಅಂತ್ಯಕ್ಕೆ 21,498 ಮಾನವ ದಿನ ಸೃಜನೆಯ ಗುರಿ ಇದ್ದು, 19,613 ಮಾನವ ದಿನಗಳನ್ನು ಸೃಜಿಸಿ 91.23 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 57.89 ಲಕ್ಷ ಕೂಲಿ ವೆಚ್ಚ ಹಾಗೂ 19.58 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ಜನರು,ಕೂಲಿ ಕಾರ್ಮಿಕರು,ರೈತರು ಗರಿಷ್ಟ ಪ್ರಮಾಣದಲ್ಲಿ ಮಹಾತ್ಮಗಾ0ಧಿ ನರೇಗಾ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪ0ಚಾಯತ್,ತಾಲೂಕು ಪ0ಚಾಯತ್ ಅಥವಾ ಅನುಷ್ಟಾನ ಇಲಾಖೆಯ ಕಛೇರಿಗಳನ್ನು ಸ0ರ್ಪಕಿಸಬಹುದಾಗಿರುತ್ತದೆ ಅಥವಾ ಉಡುಪಿ ಜಿಲ್ಲಾ ಪ0ಚಾಯತ್ ಕಛೇರಿಯ ದೂರ ವಾಣಿ ಸ0ಖ್ಯೆ-0820 2574945 ನ್ನು ಕಛೇರಿ ವೇಳೆಯಲ್ಲಿ ಸ0ರ್ಪಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!