ಲಸಿಕೆ ಪಡೆಯಲು ಇನ್ನು ಮುಂದೆ ಮುಂಗಡ ಆನ್‌ಲೈನ್‌ ನೋಂದಣಿ, ಕಾಯ್ದಿರಿಸುವಿಕೆ ಕಡ್ಡಾಯವಲ್ಲ: ಕೇಂದ್ರ ಸರಕಾರ

ನವದೆಹಲಿ ಜೂ.16: ಗ್ರಾಮೀಣ ಭಾಗದ ಜನತೆ ಲಸಿಕೆ ಪಡೆಯಲು ತೊಂದರೆ ಪಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆ ಪಡೆಯಲು ಇನ್ನು ಮುಂದೆ ಮುಂಗಡ ಆನ್‌ಲೈನ್‌ ನೋಂದಣಿ ಹಾಗೂ ಕಾಯ್ದಿರಿಸುವಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದೆ.

ಈ ಬಗ್ಗೆ ನಿರ್ಧಾರ ಕೈಗೊಂಡಿರುವ ಕೇಂದ್ರ ಸರಕಾರ, ಇನ್ನು ಮುಂದೆ 18 ವರ್ಷ ಮೇಲ್ಪಟ್ಟವರು ಆಯಾ ಲಸಿಕೆ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದಿದೆ. ಈವರೆಗೆ ಲಸಿಕೆ ಪಡೆಯಲು ಕೋವಿನ್‌ ಆ್ಯಪ್‌ನಲ್ಲಿ ನೋಂದಣಿ ಮಾಡಬೇಕಿತ್ತು. ನಂತರ ದಿನಾಂಕ ಗೊತ್ತುಪಡಿಸಿದ ಬಳಿಕ, ಆಯಾ ಕೇಂದ್ರಕ್ಕೆ ತರಳಿ ಲಸಿಕೆ ಪಡೆಯಬೇಕಿತ್ತು. ಇದರಿಂದ ಗ್ರಾಮೀಣ ಭಾಗದ ಜನರು ಲಸಿಕೆ ಪಡೆಯಲು ಕಷ್ಟ ಪಡುವಂತಾಗಿತ್ತು ಆದ್ದರಿಂದ ಇನ್ನು ಮುಂದೆ ಕೋವಿಡ್ ಲಸಿಕೆ ಪಡೆಯಲು ಮುಂಗಡ ಆನ್‌ಲೈನ್‌ ನೋಂದಣಿ ಹಾಗೂ ಕಾಯ್ದಿರಿಸುವಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ಮಾಹಿತಿ ನೀಡಿದೆ

Leave a Reply

Your email address will not be published. Required fields are marked *

error: Content is protected !!