ಬೆಲೆ ಏರಿಕೆಯಿಂದಾಗಿ ದೇಶದ ಜನರನ್ನು ಬೀದಿಯಲ್ಲಿ ನಿಲ್ಲಿಸಿದ ಸರಕಾರ: ಪ್ರಶಾಂತ್ ಜತ್ತನ್ನ

ಉಡುಪಿ(ಉಡುಪಿ ಟೈಮ್ಸ್ ವರದಿ): ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೆ, ಪ್ರತಿ ದಿನವೆಂಬಂತೆ ದೇಶದ ಬಡ ವರ್ಗ ಮತ್ತು ಮಧ್ಯಮ ವರ್ಗದ ಜನರನ್ನು ಬೀದಿಯಲ್ಲಿ ನಿಲ್ಲಿಸುತ್ತಿದ್ದಾರೆ. ನೋಟ್ ಬ್ಯಾನ್ ನಿಂದ ಆರಂಭವಾಗಿ ಇಂದಿನ ವ್ಯಾಕ್ಸಿನ್ ವರೆಗೆ ಪ್ರತಿ ವಿಷಯದಲ್ಲೂ ಜನರಿಗೆ ಕಷ್ಟವನ್ನು ಕೊಡುತ್ತಿದ್ದಾರೆ. ಮೊದಲೇ ಕೊರೊನಾ ಲಾಕ್ ಡೌನ್ ನಿಂದ ನೊಂದಿರುವ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪೆಟ್ರೋಲ್ ಉತ್ಪನ್ನಗಳ ಬೆಲೆಯನ್ನು ಏರಿಸಿದ ಕೇಂದ್ರ ಸರಕಾರದ ವಿರುದ್ಧ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಮುಂಬಾಗದಲ್ಲಿ ಆಯೋಜಿಸಿದ  100 ನಾಟ್ಔಟ್  ಪ್ರತಿಭಟನೆಯಲ್ಲಿ ಅವರು ಮಾತಾನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ  ಪ್ರಖ್ಯಾತ್ ಶೆಟ್ಟಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಪಕ್ಷ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿದ್ದು, ಕೆಲವರನ್ನು ಅಂಧ ಭಕ್ತರನ್ನಾಗಿಸಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ದರ ಗಗನಕ್ಕೆರಿದರೂ ಭಕ್ತರು ಮಾತ್ರ ಇನ್ನೂ ಮೋದಿ ಭಜನೆಯಲ್ಲಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ತೆರಿಗೆಯಲ್ಲಿ ಸ್ವಲ್ಪವಾದರೂ ಕಡಿತ ಮಾಡಿದಲ್ಲಿ ದೇಶದ ಕೋಟ್ಯಂತರ ಜನರ ಜೀವನಕ್ಕೆ ಆಧಾರವಾಗುತ್ತಿತ್ತು ಎಂದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಎಸ್ಸಿ ಘಟಕದ ಅಧ್ಯಕ್ಷ ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಭಂಡರ್ಕರ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್  ಮುಖಂಡರಾದ ಯತೀಶ್ ಕರ್ಕೇರ, ತಾರಾನಾಥ್ ಸುವರ್ಣ, ಗಣೇಶ್ ದೇವಾಡಿಗ, ಸುಧೇಶ್ ಶೇಟ್, ಶರತ್ ಶೆಟ್ಟಿ, ಶೇಕರ್ ಶೆಟ್ಟಿ, ಸಾಯಿರಾಜ್ ಕೋಟ್ಯಾನ್, ಹಮಧ್, ರಮೇಶ್ ಮಲ್ಪೆ, ರಿಕಿತ್, ಪ್ರದೀಪ್ ಆಂಚನ್, ಪ್ರಜ್ವಲ್ ಆಂಚನ್, ಪ್ರಶಾಂತ್, ಸಂಜಯ್, ಅಜಾನ್, ನವೀನ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅವೈಜ್ಞಾನಿಕ ಪೆಟ್ರೋಲ್ ಡೀಸಿಲ್  ದರ ಏರಿಕೆಯನ್ನು ಖಂಡಿಸಿ #petrol_100notout ಎಂಬ ಹೆಸರಿನಲ್ಲಿ ಉಡುಪಿ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ವತಿಯಿಂದ ಅಂಬಲ್ಪಾಡಿ ರಿಲಾಯನ್ಸ್ ಪೆಟ್ರೋಲ್ ಬಂಕ್‌ನ ಎದುರುಗಡೆ ಪ್ರತಿಭಟನೆ ಕಾರ್ಯಕ್ರಮ ನಡೆಯಿತು.

ಪ್ರಧಾನಿ ನರೇಂದ್ರ ಮೋದಿಯವರ ರಾಜಿನಾಮೆಗೆ ಈ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು. , ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪಾಂಗಾಳ ಇವರ ನೇತೃತ್ವದಲ್ಲಿ ನಡೆಯಿತು ,ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ನ್ಯಾಯವಾದಿಗಳಾದ ಶಿವರಾಮ ಶ್ರಿಯಾನ್, ರೆನಾಲ್ಡ್ ಪ್ರವೀಣ್ ಕುಮಾರ್, ವಿಲ್ಸನ್ ರೊಡ್ರಿಗಸ್, ಹಬೀಬ್ ಅಲಿ ಖಾದರ್, ಅನಂತ್ ನಾಯಕ್, ಸದಾಶಿವ ಅಮೀನ್, ನಾಗರಂಜನ್, ಸಂಕಪ್ಪ ಎ., ಆನಂದ ಮಡಿವಾಳ, ರವಿ ಪ್ರಕಾಶ್, ಚಂದ್ರಶೇಖರ್, ಕಿರಣ್ ಶೆಟ್ಟಿ, ರೋಹನ್ ಕುಮಾರ್, ರಾಜೇಂದ್ರ ಕುಮಾರ್, ಸಂದೇಶ್, ರಾಜು ಪೂಜರಿ, ಅಬ್ದುಲ್ ರೆಹಮಾನ್, ಭರತ್ ಪೈ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಅಬ್ದುಲ್ ಅಜೀಜ್ ಹೆಜಮಾಡಿ, ಕೃಷ್ಣ ಮೂರ್ತಿ ಆಚಾರ್ಯ, ಜ್ಯೋತಿ ಹೆಬ್ಬಾರ್, ಹರೀಶ್ ಕಿಣಿ, ರಮೇಶ್ ಕಾಂಚನ್, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ಜನಾರ್ದನ ಭಂಡಾರ್ಕಾರ್, ಯತೀಶ್ ಕರ್ಕೇರಾ, ಪ್ರಶಾಂತ್ ಪೂಜಾರಿ, ಪ್ರಭಾಕರ್ ಆಚಾರ್ಯ ಕಟಪಾಡಿ, ಗುರು ಪ್ರಸಾದ್, ಚರಣ್ ಬಂಗೇರ,  ಸಂಜಯ್ ಆಚಾರ್ಯ, ಹಮದ್,  ಶಬರೀಶ್, ಲಕ್ಷ್ಮೀಶ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

2 thoughts on “ಬೆಲೆ ಏರಿಕೆಯಿಂದಾಗಿ ದೇಶದ ಜನರನ್ನು ಬೀದಿಯಲ್ಲಿ ನಿಲ್ಲಿಸಿದ ಸರಕಾರ: ಪ್ರಶಾಂತ್ ಜತ್ತನ್ನ

  1. 10 laksa 20 laksa car hidkandavrige 20 rs petrol ge kodu thakath ilya. haykand obbobre thirgud beda.. 4 jana seri haykand thirgini. thirguke haykamdub..

  2. ಪೆ_ಟ್ರೋಲಾಯಣ

    ಪೆಟ್ರೋಲ್ ನೂರಾದದ್ದು ಕಂಡ ನನಗೆ ಸ್ವಾತಂತ್ರ್ಯ ಬಂದ ವರ್ಷಗಳ ನಂತರವೂ ಕತ್ತಲಲ್ಲಿದ್ದ ಹಳ್ಳಿಗಳಿಗೆ ವಿದ್ಯುತ್ ತಲುಪಿದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ 8 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ ಸಿಗುವಂತಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಗಂಗಾ ನದಿ ಶುಚಿಯಾಗಿ ಸಂಭ್ರಮಿಸಿದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಬ್ಯಾಂಕ್ ಮುಖವನ್ನೇ ನೋಡಿಲ್ಲದ ಕೋಟಿ-ಕೋಟಿ ಜನರ ಖಾತೆ ತೆರೆಯುವಂತಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಬಯಲುಶೌಚ ಮುಕ್ತವಾದ ನನ್ನ ದೇಶ ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಹ‌ವಾಯಿ ಚಪ್ಪಲಿ ಹಾಕುವವ ಹವಾಯಿ ಜಹಾಜ್ ನಲ್ಲಿ ಸಂಚರಿಸುವಂತಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಸಾಲುಮರದ ತಿಮ್ಮಕ್ಕರಂತಹರನ್ನು ಪದ್ಮ ಪ್ರಶಸ್ತಿಗಳು ಹುಡುಕಿಕೊಂಡು ಬಂದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ವಿಶೇಷ ವ್ಯಕ್ತಿಗಳ ವಾಹನಗಳಿಂದ ಕೆಂಪು ದೀಪ ಮಾಯವಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಂಚಿಹೋಗಿದ್ದ ನನ್ನ ದೇಶವನ್ನು ಒಗ್ಗೂಡಿಸಿದವನ ವಿಶ್ವದ ಅತಿ ಎತ್ತರದ ಪ್ರತಿಮೆ ಸ್ಟ್ಯಾಚು ಆಫ್ ಯೂನಿಟಿ ತಲೆ ಎತ್ತಿ ನಿಂತದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಸಿಗುವಂತಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ರಕ್ಷಣಾ ವ್ಯವಸ್ಥೆಗೆ ಆತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರ್ಪಡೆಗೊಂಡಿದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ದಶಕಗಳ ಕನಸಾದ ರಫೇಲ್ ಬಂದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಟ್ರಿಪಲ್ ತಲಾಕ್ ತರಹದ ಒಂದು ಅನಿಷ್ಟ ಪದ್ಧತಿ ರದ್ದಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ದೇಶದ ಭದ್ರತೆಗೆ ಮಾರಕವಾಗಿರುವ ಅಕ್ರಮ ನುಸುಳುಕೋರರನ್ನು ಒದ್ದು ಓಡಿಸಲು ಬಂದಿರುವ ಸಿಎಎ ಕಾನೂನು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಶತಮಾನಗಳಿಂದ ಕಗ್ಗಂಟಾಗಿದ್ದ ರಾಮ ಮಂದಿರ ವಿವಾದ ಯಾವುದೇ ತಂಟೆ-ತಕರಾರಿಲ್ಲದೆ ಇತ್ಯರ್ಥವಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಭವ್ಯ ರಾಮಮಂದಿರ ನಿರ್ಮಾಣ ಆರಂಭವಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಆರ್ಟಿಕಲ್ ರದ್ದಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ದೇಶದ ನಂಬರ್ 1 ವೈರಿ ಚೀನಾವನ್ನು ಹಿಮ್ಮೆಟ್ಟಿಸಿದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಪಾಕಿಸ್ತಾನಕ್ಕೆ ಅವರದೇ ನೆಲದಲ್ಲಿ ನುಗ್ಗಿ ಹೊಡೆದು ಬುದ್ಧಿ ಕಲಿಸಿದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ವಿಜ್ಞಾನಿಗಳ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಇಡೀ ವಿಶ್ವವೇ ಯೋಗದೆಡೆಗೆ ಹೊರಳುವಂತೆ ಮಾಡಿದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ರೈತರ ಖಾತೆಗೆ ವಾರ್ಷಿಕ ಎಲ್ಲಿಗೂ ಅಲೆಯದೆ ಸೀದಾ ಖಾತೆಗೆ ಜಮೆಯಾಗುವಂತೆ ಆದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಹೊಸ ಶೈಕ್ಷಣಿಕ ನೀತಿ ಜಾರಿಯಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಹೊಸ ಕೃಷಿ ಕಾನೂನು ಜಾರಿಯಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ನಮ್ಮ ವೈದ್ಯಕೀಯ ಕ್ಷೇತ್ರ ಕರೋನಾದಂತಹ ಮಹಾಮಾರಿಗೆ ಲಸಿಕೆ ಕಂಡುಹಿಡಿದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಯಾವುದೇ ರಾಷ್ಟ್ರ ತೊಂದರೆಯಲ್ಲಿದ್ದರೆ ಮೊದಲು ಸಹಾಯಹಸ್ತ ಚಾಚುವ ನನ್ನ ದೇಶ ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಾವಾಡಿಗರ ದೇಶ ಎಂದು ಬಿಂಬಿತವಾಗಿದ್ದ ನನ್ನ ದೇಶದ ಇಮೇಜು ಬದಲಾದದ್ದು ಕಾಣಲೇ ಇಲ್ಲ.
    ಪೆಟ್ರೋಲ್ ನೂರಾದದ್ದು ಕಂಡ ನನಗೆ ಹಂತ ಹಂತವಾಗಿ ಆತ್ಮ ನಿರ್ಭರವಾಗುತ್ತಿರುವ ನನ್ನ ದೇಶ ಕಾಣಲೇ ಇಲ್ಲ.

    ಮೋದಿ ಫೋಬಿಯಾ ಇರುವ ನನಗೆ ಕಂಡಿದ್ದು ಪೆಟ್ರೋಲ್ ನೂರಾದದ್ದು ಮಾತ್ರ..

Leave a Reply

Your email address will not be published. Required fields are marked *

error: Content is protected !!