ಕೃಷಿ ತಿದ್ದುಪಡಿ ಕಾಯ್ದೆ ರೈತರ ಪರವಾಗಿರಲಿ: ಕಟಪಾಡಿ ಶಂಕರ ಪೂಜಾರಿ
ಉಡುಪಿ ಜೂ.15(ಉಡುಪಿ ಟೈಮ್ಸ್ ವರದಿ) ಕೃಷಿ ತಿದ್ದುಪಡಿ ಕಾಯ್ದೆ ರೈತರ ಪರವಾಗಿರಲಿ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಅವರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಿದ್ದುಪಡಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಜೊತೆ ಸರಕಾರ ಮಾತುಕತೆಗೆ ಬದ್ಧವಾಗಿದೆ ಎಂದು ಹೇಳಿದ ಕೇಂದ್ರ ಕೃಷಿ ಸಚಿವರ ಹೇಳಿಕೆ ಸ್ವಾಗತಾರ್ಹ.ಆದರೂ ಕಾಯ್ದೆಯ ಮೂಲ ಆಶಯಗಳಿಗೆ ಧಕ್ಕೆ ಆಗಬಾರದು ಎಂದು ಅವರು ಹೇಳಿದ್ದಾರೆ.
1974ರ ಕೃಷಿ ತಿದ್ದುಪಡಿ ಕಾಯ್ದೆ ಕಲಂ 79(ಉ) ಮತ್ತು 79 (ಬಿ )ಪ್ರಕಾರ ಕೃಷಿಕರಲ್ಲದವರು ಹಾಗೂ ಕೃಷಿಯೇತರ ಆದಾಯದಿಂದ ತೆರಿಗೆ ಪಾವತಿಸುವವರು ಕೃಷಿಭೂಮಿ ಖರೀದಿಸುವಂತಿಲ್ಲ ಕಂಪೆನಿ, ಟ್ರಸ್ಟ್ ಇತ್ಯಾದಿ ಸಂಸ್ಥೆಗಳು ಖರೀದಿಸುವಂತಿಲ್ಲ. ಈ ಎಲ್ಲಾ ನಿಬಂಧನೆಗಳು ಸಂವಿಧಾನದ 9ನೇ ಪರಿಚ್ಛೇದದಲ್ಲಿಯೂ ಸೇರ್ಪಡೆಗೊಂಡಿದೆ. ಪ್ರಸ್ತುತ ರಾಜ್ಯ ಸರ್ಕಾರ ಕಾಯ್ದೆಯ ಕಲಂನ್ನು ತೆಗೆದು ಹಾಕಿರುವುದು ಅಕ್ಷಮ್ಯ ಎಂದು ಅವರು ತಿಳಿಸಿದ್ದಾರೆ.