ಇನ್’ಸ್ಟಾಗ್ರಾಂ ನಲ್ಲಿ ಪರಿಚಯ ಆದ ನಕಲಿ ವೈದ್ಯನಿಂದ ವಿಧವೆಗೆ 80 ಲಕ್ಷ ರೂ. ವಂಚನೆ
ಬೆಂಗಳೂರು ಜೂ.15: ಇಸ್ಟಾಗ್ರಾಂ ನಲ್ಲಿ ಪರಿಚಯ ಆದ ನಕಲಿ ವೈದ್ಯನೊಬ್ಬ 80 ಲಕ್ಷ ರೂ ವಂಚಿಸಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾರ್ಬಿಸ್ ಹಾರ್ಮನ್ ಪ್ರಕರಣದ ಆರೋಪಿ. 50 ವರ್ಷದ ವಿಧವೆ ಮಹಿಳೆಗೆ ಇನ್‍ಸ್ಟಾಗ್ರಾಂ ನಲ್ಲಿ ಪರಿಚಯ ಆದ ಈತ, ತಾನು ಹೃದಯ ತಜ್ಞ ಎಂದು ಪರಿಚಯಿಸಿಕೊಂಡಿದ್ದಾನೆ.ಮಹಿಳೆಗೆ ಹೃದಯ ಸಂಬಂಧ ಖಾಯಿಲೆ ಇದ್ದಿದ್ದರಿಂದ ಇನ್‍ಸ್ಟಾಗ್ರಾಂ ನಲ್ಲಿ ಡಾಕ್ಟರ್ ಹುಡುಕುವಾಗ, ಹಾರ್ಮನ್ ಪ್ರೋಫೈಲ್ ಸಿಕ್ಕಿದೆ. ನಂತರ ವಾಟ್ವಪ್ ಗೆ ಕನೆಕ್ಟ್ ಆಗಿ, ಸಲಹೆ ನೀಡುತ್ತೇನೆ ಎಂದು ನಕಲಿ ವೈದ್ಯ ಮಹಿಳೆಗೆ ನಂಬಿಸಿದ್ದ.
ಕೆಲ ದಿನಗಳ ನಂತರ ವಿಧವೆ ಮಹಿಳೆಗೆ ಈ ನಕಲಿ ಡಾಕ್ಟರ್ ಯುಕೆಯಿಂದ ಕರೆನ್ಸಿ ಹಾಗೂ ಗಿಫ್ಟ್ ಕಳಿಸಿದ್ದ. ಎರಡು ದಿನಗಳ ನಂತರ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿ ಮಹಿಳೆಗೆ ಕರೆ ಮಾಡಿ ನೀವು ಗಿಫ್ಟ್ ಸ್ವೀಕರಿಸಿಲ್ಲ, ವಿತ್ತ ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಫೇಕ್ ಕಸ್ಟಮ್ಸ್ ಅಧಿಕಾರಿಗಳು ನಕಲಿ ಲೆಟರ್ ತೋರಿಸಿದ್ದಾರೆ. ಇದನ್ನು ನಂಬಿದ ಮಹಿಳೆ 80 ಲಕ್ಷ ರೂಪಾಯಿ ಯನ್ನು ನೀಡಿದ್ದಾರೆ. ಇದೀಗ ತಾನು ಮೋಸ ಹೋಗಿರುವುದು ತಿಳಿದ ಮಹಿಳೆ ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.