ಬೈಂದೂರು: ಆಕಸ್ಮಿಕವಾಗಿ ಹೊಳೆಗೆ ಬಿದ್ದು ಯುವಕ ಮೃತ್ಯು
ಬೈಂದೂರು ಜೂ.15: ಆಕಸ್ಮಿಕವಾಗಿ ಹೊಳೆ ನೀರಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಬೈಂದೂರಿನ ಶಿರೂರು ಗ್ರಾಮದಲ್ಲಿ ನಡೆದಿದೆ.
ಕರಾ ಅಬ್ದುಲ್ ರಹೀಮ (27) ಮೃತಪಟ್ಟ ಯುವಕ. ಈತ ನಿನ್ನೆ ತನ್ನ ಸ್ನೇಹಿತನಾದ ಅಬ್ದಲ್ ಅನ್ಸಾರ್ ನೊಂದಿಗೆ ಆತನ ಸ್ನೇಹಿತನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದನು, ಕೆಲ ಸಮಯದ ನಂತರ ಅಬ್ದಲ್ ಅನ್ಸಾರ್ ಎಂಬಾತ ಕರಾ ಅಬ್ದುಲ್ ರಹೀಮನ ತಂದೆ ಕರಾ ಆದಂ ರವರಿಗೆ ಕರೆ ಮಾಡಿ ಇವರಿಬ್ಬರು ಸಂಕದಗುಂಡಿಯ ಹೊಳೆಯ ದಡದ ಬದಿಯಲ್ಲಿ ನಡೆದುಕೊಂಡು ಬರುವಾಗ ಕರಾ ಅಬ್ದುಲ್ ರಹೀಮನು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುತ್ತಾನೆಂದು ತಿಳಿಸಿದ್ದಾನೆ.
ಬಳಿಕ ಕರಾ ಆದಂ ರವರು ಹಾಗೂ ಅಸುಪಾಸಿನವರೊಂದಿಗೆ ಹೊಳೆಯಲ್ಲಿ ಹುಡುಕಾಡಿದಾಗಕರಾ ಅಬ್ದುಲ್ ರಹೀಮನು ಹೊಳೆ ಗಿಡಗಳಿಗೆ ಸಿಕ್ಕಕೊಂಡಿದ್ದುದು ಕಂಡು ಬಂದಿದೆ. ತಕ್ಷಣ ಚಿಕಿತ್ಸೆ ಗೆಂದು ಆತನನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಕರಾ ಅಬ್ದುಲ್ ರಹೀಮನು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.