ಬೆಂಗಳೂರು ಜೂ.14: ಅಪಘಾತದ ಸಂದರ್ಭದಲ್ಲಿ ನಟ ಸಂಚಾರಿ ವಿಜಯ್ ಅವರು ಹೆಲ್ಮೆಟ್ ಧರಿಸಿದಿದ್ದರೆ ಅವರ ಪ್ರಾಣಕ್ಕೆ ಕಂಟಕವಾಗುತ್ತಿರಲಿಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಅರುಣ್ ನಾಯ್ಕ್ ಹೇಳಿದ್ದಾರೆ.
ಇಂದು ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಅತಿ ವೇಗವಾಗಿ ಹೋಗಿದ್ದು, ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡಿರುವುದೇ ಅವರ ಪ್ರಾಣಕ್ಕೆ ಕಂಟಕವಾಗಿದೆ. ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಹಾಕಿರುತ್ತಿದ್ದರೆ ಬ್ರೇನ್ ಫೇಲ್ಯೂರ್ ಆಗ್ತಿರಲಿಲ್ಲ. ಘಟನೆ ನಡೆದ 20 ನಿಮಿಷಗಳಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆದರೆ ಆಸ್ಪತ್ರೆಗೆ ಸೇರಿಸೋ ಸಮಯಕ್ಕಾಗಾಲೇ ಸಂಚಾರಿ ವಿಜಯ್ ಅವರು ಕೋಮಾ ಸ್ಟೇಜ್ ಗೆ ಹೋಗಿದ್ದರು. ಕೂಡಲೇ ಆಪರೇಷನ್ ಮಾಡಲಾಗಿತ್ತು. ಅದರೂ ಅವರ ಬ್ರೈನ್ ವರ್ಕ್ ಆಗಿರಲಿಲ್ಲ ಎಂದು ಹೇಳಿದರು.
ಇತ್ತ ವಿಜಯ್ ಅವರ ಸಹೋದರ ಸಿದ್ದೇಶ್ ಅವರು ಮಾತನಾಡಿ, ವಿಜಯ್ ಅವರ ಅಂಗಾಗ ಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.
ಶನಿವಾರ ಬೈಕ್ ಅಪಘಾತದಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದ ನಟ ವಿಜಯ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಇಂದು ಮೆದುಳು ನಿಷ್ಕ್ರಿಯಗೊಂಡು ಅವರು ಮೃತಪಟ್ಟಿದ್ದಾರೆ.
| | |