ತೋಟಗಾರಿಕಾ ಮಿಷನ್ ಯೋಜನೆಯಡಿ ರೈತರಿಗೆ ಸಿಗುವ ಪ್ರಯೋಜನಗಳು
ಉಡುಪಿ: ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಜಿಲ್ಲೆಯ ರೈತರಿಗೆ ಕೆಲವು ಯೋಜನೆಗಳು ಲಭ್ಯ ವಿವೆ. ಆ ಯೋಜನೆಗಳ ಮಾಹಿತಿಯ ವಿವರ ಇಲ್ಲಿದೆ.
ಸಣ್ಣ ಸಸ್ಯಾಗಾರಕ್ಕೆ ಸಹಾಯಧನ: 1 ಹೆಕ್ಟೇರ್ ವಿಸ್ತೀರ್ಣದಲ್ಲಿ ಬ್ಯಾಂಕ್‌ನಿಂದ ಅವಧಿ ಸಾಲ ಪಡೆದು ಹೊಸದಾಗಿ ನಿರ್ಮಿಸುವ ಸಸ್ಯಾಗಾರ ಅಥವಾ ನರ್ಸರಿಗೆ ಒಟ್ಟು ವೆಚ್ಚದ ಶೇ 50ರಷ್ಟು, ಗರಿಷ್ಠ ₹ 7.50 ಲಕ್ಷ ಸಹಾಯಧನ ನೀಡಲಾಗುವುದು.
ವಿಸ್ತರಣೆ: ಪ್ರತಿ ಫಲಾನುಭವಿ ಕನಿಷ್ಠ 0.20 ಹೆಕ್ಟೇರ್ ಹಾಗೂ ಗರಿಷ್ಠ 4 ಹೆಕ್ಟೇರ್‌ವರೆಗೆ ಒಟ್ಟು ವೆಚ್ಚದ ಶೇ 40ರಷ್ಟು ಸಹಾಯಧನ ಪಡೆಯಬಹುದು. ಬಾಳೆಗೆ 26,000, ಬಾಳೆ (ಅಂಗಾಂಶ ಕೃಷಿ) ₹ 40,800. ಅನಾನಸು (ಕಂದು) ₹35,000, ಹೈಬ್ರೀಡ್ ತರಕಾರಿ ₹ 20,000, ಬಿಡಿ ಹೂವು ₹16,000, ಕಾಳುಮೆಣಸು ₹ 20,000 ಗೇರು, ಕೊಕ್ಕೊ ₹ 20,000 ಸಹಾಯಧನ ಸಿಗಲಿದೆ.
ಅಣಬೆ ಉತ್ಪಾದನಾ ಘಟಕ: ಅಣಬೆ ಉತ್ಪಾದನಾ ಘಟಕಕ್ಕೆ ಒಟ್ಟು ವೆಚ್ಚದ ಶೇ 40, ಗರಿಷ್ಠ ₹ 8 ಲಕ್ಷ ಸಹಾಯಧನ ಸಿಗಲಿದೆ. ಕಾಳು ಮೆಣಸು ತೋಟಗಳ ಪುನಶ್ಚೇತನಕ್ಕೆ ಒಟ್ಟು ವೆಚ್ಚದ ಶೇ 50 ರಷ್ಟು, ಹೆಕ್ಟೇರ್‌ಗೆ ಗರಿಷ್ಠ ₹ 10,000 ಸಹಾಯಧನ ಸಿಗಲಿದೆ. ಕೃಷಿ ಹೊಂಡಕ್ಕೆ ₹ 75,000 ನೆರವು ಸಿಗಲಿದ್ದು, ರೈತರು 1 ಹೆಕ್ಟೇರ್ ಜಮೀನು ಹೊಂದಿರಬೇಕು. ಪ್ಲಾಸ್ಟಿಕ್ ಹೊದಿಕೆ ಉಪಯೋಗಿಸಿ ತರಕಾರಿ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ ಗರಿಷ್ಠ ₹ 16,000 ಪಡೆಯಬಹುದು.
ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗಿಸುವ ಸಸ್ಯ ಸಂರಕ್ಷಣಾ ಔಷಧಿ, ಜೈವಿಕ ಗೊಬ್ಬರ, ಜೈವಿಕ ಪೀಡೆ ನಾಶಕಗಳ ಖರೀದಿಗೆ ಹೆಕ್ಟೇರ್‌ಗೆ ಗರಿಷ್ಠ ₹ 1,200, ಜೇನು ಸಾಕಣೆಗೆ ಜೇನು ಪೆಟ್ಟಿಗೆ ವೆಚ್ಚ ₹ 800 (ಗರಿಷ್ಠ 50 ಪೆಟ್ಟಿಗೆ) ಜೇನು ಕುಟುಂಬ ವೆಚ್ಚ ₹ 800 (50 ಕುಟುಂಬ) ಜೇನು ಸಂಗ್ರಹಣಾ ಯಂತ್ರಕ್ಕೆ ₹ 8,000 ಪಡೆಯಬಹುದು. 20 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಗೆ ಸಣ್ಣ, ಅತಿ ಸಣ್ಣ, ಮಹಿಳಾ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಒಟ್ಟು ವೆಚ್ಚದ ಶೇ 35ರಷ್ಟು ಗರಿಷ್ಠ ₹ 1 ಲಕ್ಷ ಹಾಗೂ ಇತರೆ ರೈತರು ಒಟ್ಟು ವೆಚ್ಚದ ಶೇ 25ರಷ್ಟು ₹ 75,000 ಸಹಾಯಧನ ಪಡೆಯಬಹುದು.
ಪ್ಯಾಕ್ ಹೌಸ್‌ಗೆ ಗರಿಷ್ಠ ₹ 2 ಲಕ್ಷ, ತೋಟಗಾರಿಕೆ ಬೆಳೆಗಳ ಸಂಸ್ಕರಣಾ ಘಟಕಗಳಿಗೆ ಒಟ್ಟು ವೆಚ್ಚದ ಶೇ 40 ರಷ್ಟು ಗರಿಷ್ಠ ₹ 10 ಲಕ್ಷ ನೀಡಲಾಗುತ್ತದೆ.