ಕಾರ್ಕಳ, ಜೂ 14: ಜನರ ತೆರಿಗೆ ಹಣ ಎಲ್ಲಿ ಹೋಯಿತು. ಬಿಜೆಪಿಯ ಕಿಸೆಗೆ ಹೋಯಿತೇ? ಎಂದು ಕಾಂಗ್ರೆಸ್ ನ ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಮಾರ್ಗದರ್ಶನದಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ಸಿನ ಬಜಗೋಳಿ ಗ್ರಾಮ ಸಮಿತಿ, ಮಹಿಳಾ ಸಮಿತಿ ರ್ಯಾಲಿ ವತಿಯಿಂದ ಆಯೋಜಿಸಿದ್ದ “ಪೆಟ್ರೋಲ್ 100 ನಾಟ್ ಔಟ್” ಪ್ರತಿಭಟನಾ ರೇಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರದ ಬಳಿ ಹಣವಿಲ್ಲ, ಆದೆ ಬೆಲೆ ಏರಿಕೆಯಾಗುತ್ತಿದೆ ಹಾಗಿದ್ರೆ ಜನರ ತೆರಿಗೆ ಹಣ ಎಲ್ಲಿ ಹೋಯಿತು. ಬಿಜೆಪಿಯ ಕಿಸೆಗೆ ಹೋಯಿತೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಪ್ರಶ್ನೆಗೆ ಉತ್ತರ ಸಿಗುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಕಳೆದ 6 ವರ್ಷಗಳಲ್ಲಿ ಇಂಧನ ಬೆಲೆ 300 ಶೇ. ಏರಿಕೆಯಾಗಿದೆ. ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಲೀಟರಿಗೆ ಸುಮಾರು 64.21 ಶೇ. ತೆರಿಗೆ ಹೊರಿಸುತ್ತಿವೆ. ಇದರ ಹೊರತಾಗಿಯೂ ದೇಶ ಅಭಿವೃದ್ಧಿ ಕಂಡಿಲ್ಲ. ಕೊರೋನಾ ನಿರ್ವಹಣೆ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರದ ಬಳಿ ಹಣವಿಲ್ಲ. ಸರಕಾರಿ ಸಂಸ್ಥೆಗಳು ಬಿಕರಿ ಅಗುತ್ತಿವೆ. ಆದಾಗ್ಯೂ ಕೇಂದ್ರ ಇಂಧನ ಸಚಿವರು ಅಭಿವೃದ್ಧಿಯ ಕೆಲಸಗಳಿಗಾಗಿ ನಾವು ಇಂಧನ ಬೆಲೆ ಏರಿಕೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ಈ ತೆರಿಗೆ ಹಣ ಎಲ್ಲಿಗೆ ಹೋಯಿತು. ಬಿಜೆಪಿಯ ಕಿಸೆಗೆ ಹೋಯಿತೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ನಳಿನಿ ಆಚಾರ್ಯ ಹಾಗೂ ಮಾಜಿ ತಾಪಂ. ಸದಸ್ಯ ಸುಧಾಕರ ಶೆಟ್ಟಿ ಇಂಧನ ಬೆಲೆ ಏರಿಕೆ ಖಂಡಿಸಿ ಮಾತಾಡಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಮಾಜಿ ತಾಪಂ. ಸದಸ್ಯ ದಯಾನಂದ ಬಂಗೇರ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಆರೀಫ್ ಕಲ್ಲೊಟ್ಟೆ, ಬ್ಲಾಕ್ ಪ್ರದಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಅಜಿತ್ ಹೆಗ್ಡೆ, ಅನಿಲ್ ಪೂಜಾರಿ, ಸುನೀಲ್ ಕೋಟ್ಯಾನ್, ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ಪುರಸಭಾ ಸದಸ್ಯರಾದ ಶುಭದಾ ರಾವ್, ರೆಹಮತ್, ಸೋಮನಾಥ ನಾಯ್ಕ್, ಹಾಗೂ ಪ್ರಥ್ವೀರಾಜ್ ಜೈನ್, ಸಂತೋಷ ಪೂಜಾರಿ, ನಾಗೇಶ ಭಂಡಾರಿ, ಸುನೀಲ್ ಭಂಡಾರಿ, ರಮಾಕಾಂತ ಶೆಟ್ಟಿ, ಮಕ್ಬೂಲ್, ಅಬ್ದುಲ್ ರಹೀಮ್, ರಂಜಿತ್ ಟಿಸಿ ಭಾಗವಹಿಸಿದ್ದರು. | | |