ಉಡುಪಿ, ದ.ಕ, ಉ.ಕ ಜಿಲ್ಲೆಗಳಲ್ಲಿ ಜೂ15-16 ರಂದು ಭಾರೀ ಮಳೆ- ರೆಡ್ ಅಲರ್ಟ್ ಘೋಷಣೆ

ಉಡುಪಿ:ಜೂ.14 (ಉಡುಪಿ ಟೈಮ್ಸ್ ವರದಿ) ಕರಾವಳಿಯಲ್ಲಿ ಮುಂದಿನ 5 ದಿನಗಳ ಕಾಲ ಗುಡುಗು ಮಿಂಚು ಸಹಿತ‌ ಭಾರಿ ಮಳೆ ಯಾಗಲಿದ್ದು. ಇಂದಿನಿಂದ ಜೂ.16 ರ ವರೆಗೆ ಕರ್ನಾಟಕ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಾಳೆ ಅಂದರೆ ಜೂ.15 ರಿಂದ ಜೂ.19 ರ ವರೆಗೆ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಗಾಳಿ ಮಳೆಯಾಗಲಿದೆ ಎಂದು ತಿಳಿಸಿದೆ. 

ಈ ದಿನಗಳಲ್ಲಿ ಕರಾವಳಿಯ ಯಲ್ಲಿ ಭಾರೀ ಮಳೆಯಾಗುವುದರಿಂದ ಜೂ.14 ರಿಂದ 16 ರ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ, ಜೂ.16 ರಿಂದ18 ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು,ಜೂ.18 ರಿಂದ 19 ರ ವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

ಈ 5 ದಿನಗಳಲ್ಲಿ ಕರಾವಳಿಯ ಹಲವು  ಪ್ರದೇಶಗಳಲ್ಲಿ 115.6 ಮಿಮಿ ನಿಂದ 204 .4 ಮಿಮಿ ವರೆಗೆ ಮಳೆಯಾಗಲಿದ್ದು, ಜೂ.15 ಮತ್ತು 16 ರಂದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ 204.5 ಮಿಮಿ ಮಳೆಯಾಗಲಿದೆ ಎಂದು ಇಲಾಖೆ ವರದಿಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!