ಉಡುಪಿ: ಜೂ16 ರಂದು ಮೊಬೈಲ್, ಬುಕ್‌ಸ್ಟಾಲ್ ತೆರೆಯಲು ಅನುಮತಿ

ಉಡುಪಿ ಜೂ.13(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿ ಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವಶ್ಯಕವಾಗಿರುವ ಬುಕ್‌ಸ್ಟಾಲ್/ಸ್ಟೇಷನರಿ ಹಾಗೂ ಮೊಬೈಲ್ ಅಂಗಡಿಗಳನ್ನು ತೆರೆಯಲು ಒಂದು ದಿನದ ಮಟ್ಟಿಗೆ ಜೂ.16 ರಂದು ಅವಕಾಶ ನೀಡಲಾಗಿದೆ‌.

ಈ ಬಗ್ಗೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು, ಬುಕ್‌ಸ್ಟಾಲ್/ಸ್ಟೇಷನರಿ ಹಾಗೂ ಮೊಬೈಲ್ ಅಂಗಡಿಗಳನ್ನುತೆರೆಯಲು ಜೂ.16ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ.ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೋವಿಡ್ ನಿಯಮಗಳಲ್ಲಿ ವಿನಾಯಿತಿ ನೀಡಲಾಗಿದೆ.ಅದರಂತೆ ಸರಕಾರದ ಮಾರ್ಗಸೂಚಿಯನ್ವಯ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿದಿದ್ದರೂ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳಿಗೆ ವಿನಾಯಿತಿ ನೀಡಿ  ಕೈಗಾರಿಕೆಗಳನ್ನು ನಡೆಸಲು ಅನುಮತಿಸಲಾಗಿದೆ, ಹಾಗೂ ಆಹಾರ, ಹಾಲು ಮುಂತಾದ ಅಗತ್ಯ ವಸ್ತುಗಳ ಅಂಗಡಿಗಳ ಸಮಯವನ್ನು ಬೆಳಿಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆ ಯವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.  

1 thought on “ಉಡುಪಿ: ಜೂ16 ರಂದು ಮೊಬೈಲ್, ಬುಕ್‌ಸ್ಟಾಲ್ ತೆರೆಯಲು ಅನುಮತಿ

Leave a Reply

Your email address will not be published. Required fields are marked *

error: Content is protected !!