ಉಡುಪಿ: ಹೊಂಡಮಯ ರಸ್ತೆಯನ್ನು ಸ್ವತ: ದುರಸ್ತಿಗೊಳಿಸಿದ ಜುವೆಲ್ಲರಿ ಮಾಲಕ!
ಉಡುಪಿ: ಇಲ್ಲಿನ ಪ್ರಖ್ಯಾತ ಜುವೆಲ್ಲರಿ ಮಾಲಕರೊರ್ವರು ಸ್ವತ: ತಾವೇ ರಸ್ತೆಯೊಂದರ ಬೃಹತ್ ಗುಂಡಿಯನ್ನು ಮುಚ್ಚಿ ಸಾರ್ವಜಿನಿಕರ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಉಡುಪಿ ಸರ್ವಿಸ್ ಬಸ್ ನಿಲ್ದಾಣ ಬಳಿಯ “ನ್ಯೂ ಮಂಗಳ ಜುವೆಲ್ಲರ್‍ಸ್” ನ ಮಾಲಕ ಅಲೆವೂರು ಯೋಗೀಶ್ ಆಚಾರ್ಯ ತಮ್ಮ ಮನೆ ಕಡೆ ಹೋಗುವ ರಾಜ್ಯ ಹೆದ್ದಾರಿ ಕುಕ್ಕಿಕಟ್ಟೆ ರೈಲ್ವೆ ಬ್ರಿಡ್ಜ್‌ನ ಬೃಹತ್ ಗುಂಡಿಯನ್ನು ಕಾಂಕ್ರಿಟ್ ಹಾಕಿ ಮುಚ್ಚಿ ಜನರ ಶ್ಲಾಘನೆಗೆ ಒಳಗಾಗಿದ್ದಾರೆ.
ಕುಕ್ಕಿಕಟ್ಟೆ ರೈಲ್ವೆ ಸೇತುವೆಯಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಒಂದೇ ಮಳೆಯಲ್ಲಿ ಇತ್ತೀಚೆಗೆ ಡಾಮರೀಕರಣಗೊಂಡ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದಿತ್ತು. ಇದರಿಂದ ವಾಹನ ಸಂಚಾರಕ್ಕೆ ಬಹಳ ಅಡಚಣೆವುಂಟಾಗುತಿತ್ತು. ಮಾತ್ರವಲ್ಲದೆ ಪಾದಚಾರಿಗಳಿಗೂ ಕೆಸರಿನ ಅಭಿಷೇಕವಾಗುತಿತ್ತು.
ಈ ಭಾಗದಲ್ಲಿ ಚರಂಡಿಯ ಹೂಳೆತ್ತಿ ರಸ್ತೆ ಬದಿಯಲ್ಲಿ ಹಾಕಿದ್ದು, ಮಳೆಗೆ ಮತ್ತೆ ಚರಂಡಿ ಸೇರುತ್ತಿದೆ. ಟೆಂಡರ್‌ದಾರರಿಗೆ ಅದನ್ನು ವಿಲೇವಾರಿ ಮಾಡಬೇಕೆಂಬ ಷರತ್ತು ಇದ್ದರೂ ಅದನ್ನು ಪಾಲಿಸದಿರುವ ಬಗ್ಗೆ ಸ್ಥಳೀಯರು ಅಸಮಾಧನ ವ್ಯಕ್ತಪಡಿಸಿದ್ದಾರೆ.
Well done very good job.