ಕೋವಿಡ್-19 ಔಷಧಿ, ಉಪಕರಣಗಳ ಮೇಲಿನ ತೆರಿಗೆ ಕಡಿತ: ನಿರ್ಮಲಾ ಸೀತಾರಾಮನ್

ನವದೆಹಲಿ: ಶನಿವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯು ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು ಮತ್ತು ವೈದ್ಯಕೀಯ ಆಮ್ಲಜನಕದಂತಹ ಸರಕುಗಳಿಗೆ ತೆರಿಗೆ ದರವನ್ನು ಕಡಿತಗೊಳಿಸಿದೆ,

Tocilizumab  ಹಾಗೂ  Amphotericin B ಔಷಧಿಗಳ ಮೇಲೆ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ನಿಗದಿಪಡಿಸಿದರೆ ರೆಮ್‌ಡೆಸಿವಿರ್ ಮತ್ತು ಹೆಪಾರಿನ್‌ನಂತಹ ಆಂಟಿ ಕೋಗುಲಂಟ್‌ಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ 5 ಕ್ಕೆ ಇಳಿಸಲಾಗಿದೆ

ವೈದ್ಯಕೀಯ ಆಮ್ಲಜನಕ, ಆಮ್ಲಜನಕ ಕಾನ್ಸಂಟ್ರೇಟರ್ ಗಳು, ವೆಂಟಿಲೇಟರ್‌ಗಳು, ಬೈಪಾಪ್ ಯಂತ್ರಗಳು ಮತ್ತು ಹೈ ಫ್ಲೋ ನಾಸಲ್ ಕ್ಯಾನುಲ್ಲಾ ಸಾಧನಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ 5 ಕ್ಕೆ ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಅಲ್ಲದೆ, ಕೋವಿಡ್ ಪರೀಕ್ಷಾ ಕಿಟ್‌ಗಳ ಮೇಲಿನ ತೆರಿಗೆಯನ್ನು ಶೇಕಡಾ 12 ರಿಂದ ಶೇ 5 ಕ್ಕೆ ಇಳಿಸಲಾಗಿದೆ. ಪಲ್ಸ್ ಆಕ್ಸಿಮೀಟರ್, ಹ್ಯಾಂಡ್ ಸ್ಯಾನಿಟೈಸರ್, ತಾಪಮಾನ ತಪಾಸಣೆ ಉಪಕರಣಗಳು ಮತ್ತು ಆಂಬುಲೆನ್ಸ್‌ಗಳ ಮೇಲೆ ಸಹ ತೆರಿಗೆಯನ್ನು ಶೇಕಡಾ 5 ರಷ್ಟು ಇಳಿಕೆ ಮಾಡಲಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!