ಕಾಪು: ಅಸ್ವಸ್ಥಗೊಂಡಿದ್ದ ವ್ಯಕ್ತಿಯ ಮೃತ್ಯು
ಕಾಪು ಜೂ.12(ಉಡುಪಿ ಟೈಮ್ಸ್ ವರದಿ): ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಳೂರಿನಲ್ಲಿ ನಡೆದಿದೆ. ಮಾಲತೇಶ (37) ಮೃತಪಟ್ಟವರು.
ಎಂದಿನಂತೆ ಜೂ.11 ರಂದು ಮಾಲತೇಶರವರು ಕೆಲಸಕ್ಕೆ ಹೋಗಿದ್ದರು. ಬಳಿಕ ಮಧ್ಯಾಹ್ನ 1.30 ರ ಸುಮಾರಿಗೆ ರಾಜೇಶ್ ಎಂಬುವವರು ಮಾಲತೇಶರವರ ಪತ್ನಿ ನಿರ್ಮಲ ಅವರು ಕೆಲಸ ಮಾಡುತ್ತಿದ್ದಲ್ಲಿಗೆ ಬಂದು ಮಾಲತೇಶ ಅವರು ಅಸ್ವಸ್ಥ ಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ನಿರ್ಮಲ ಅವರು ಸ್ಥಳಕ್ಕೆ ತೆರಳಿ ಮಾಲತೇಶ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿದ್ದು,ಆಸ್ಪತ್ರೆಯ ಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಅದರಂತೆ ಮಾಲತೇಶ ಅವರು ಹೃದಯ ಸಂಬಂಧಿ ಕಾಯಿಲೆ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.