ವೀಲುನಾಮೆನಾಮೆಯೇ ಪತ್ನಿ, ಮಗ, ಪ್ರಿಯಕರ ಜೀವನ ಪರ್ಯಂತ ಕಂಬಿ ಎನಿಸುವಂತೆ ಮಾಡಿತು…

ಉಡುಪಿ ಜೂ.11(ಉಡುಪಿ ಟೈಮ್ಸ್ ವರದಿ): ಉಡುಪಿಯ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಮೂಲಕ ಅಂತ್ಯ ಕಂಡಿದೆ. ಆದರೂ ಈ ಪ್ರಕರಣ ಈಗಲೂ ಚರ್ಚೆ ನಡೆಯುತ್ತಿದೆ.

ಸದ್ಯ ಈ ಪ್ರಕರಣ ದಲ್ಲಿ ಚರ್ಚೆ ನಡೆಯುತ್ತಿರುವ ವಿಚಾರ ಭಾಸ್ಕರ್ ಶೆಟ್ಟಿ ಅವರ ಆಸ್ತಿಯ ವಾರಸುದಾರಿಕೆ ಬಗ್ಗೆ. ಭಾಸ್ಕರ್ ಶೆಟ್ಟಿ ಅವರು ತಮ್ಮ ಹತ್ಯೆಗೆ ಎರಡು ವಾರಗಳ ಹಿಂದೆ ಅಂದರೆ 2016ರ ಜು.15ರಂದು‌ ತಮ್ಮ ಜೀವಕ್ಕೆ ಕುತ್ತು ಇರುವ ಬಗ್ಗೆ ಅರಿತು, ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯವಾದಿ ಮೂಲಕ ವೀಲುನಾಮೆಯನ್ನು ಬರೆಸಿದ್ದರು.

ಅದರಂತೆ, ನನ್ನ ಪತ್ನಿ ಬೇರೆ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರದಲ್ಲಿ ಪತ್ನಿ ಮತ್ತು ಪುತ್ರ ನನಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ನಾನು ಆಗಸ್ಟ್ ತಿಂಗಳಲ್ಲಿ ವಿದೇಶಕ್ಕೆ ಹೋಗಲಿದ್ದು, ಈ ಮಧ್ಯೆ ನನ್ನ ಜೀವದ ಬಗ್ಗೆ ನನ್ನ ಪತ್ನಿ ಮತ್ತು ಪುತ್ರ ನಿಂದ ಖಾತರಿ ಇಲ್ಲದ ಕಾರಣ ಹಾಗೂ ನನ್ನ ಪತ್ನಿ, ಪುತ್ರನೊಂದಿಗೆ ಸೇರಿಕೊಂಡು ನನ್ನ ಆಸ್ತಿಗಳನ್ನು ಲಪಟಾಯಿಸುವ ಸಾಧ್ಯತೆ ಇರುವುದರಿಂದ ನನ್ನ ಆಸ್ತಿಗಳ ಬಗ್ಗೆ ಈ ವೀಲುನಾಮೆ ಬರೆದು ಇಡುತ್ತಿದ್ದೇನೆ’. ‘ನನ್ನ ಜೀವಕ್ಕೆ ಅಪಾಯವಾಗಿ, ನಾನು ಅಕಾಲಿಕ ಮರಣ ಅಥವಾ ದುರ್ಮರಣಕ್ಕೀಡಾದಲ್ಲಿ ನನ್ನ ಎಲ್ಲ ಹಕ್ಕಿನ ಚರಾಚರ ಆಸ್ತಿಗಳು, ಅವುಗಳಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ಬರುವ ಬಾಡಿಗೆ ಹಣ, ನನ್ನ ಬ್ಯಾಂಕ್ ಖಾತೆಯಲ್ಲಿರುವ ಹಣ, ನನ್ನ ಹೆಸರಿನಲ್ಲಿರುವ ವಿಮಾ ಪಾಲಿಸಿಗಳಿಂದ ಬರುವ ಹಣ, ನನ್ನ ತಾಯಿ ಗುಲಾಬಿ ಶೆಡ್ತಿಗೆ ಸೇರತಕ್ಕದ್ದು, ಹೊರತು ಅದರಲ್ಲಿ ಬೇರೆ ಯಾರಿಗೂ ಹಕ್ಕು ಹಾಗೂ ಸಂಬಂಧಗಳು ಇರಬಾರದು. ಒಂದು ವೇಳೆ ನನಗಿಂತ ಮೊದಲು ನನ್ನ ತಾಯಿ ನಿಧನರಾದಲ್ಲಿ ನನ್ನ ಕಾಲ ನಂತರ ನನ್ನ ಆಸ್ತಿಗಳಲ್ಲಿ ತಲಾ ಶೇ.10ರಂತೆ ನನ್ನ ಮೂವರು ಸಹೋದರಿಯರಿಗೆ ಪಾಲು ಸಿಗಬೇಕು ಮತ್ತು ಉಳಿದ ಆಸ್ತಿಗಳನ್ನು ಸರಿಯಾಗಿ ಮೂರು ಭಾಗಮಾಡಿ ನನ್ನ ಮೂವರು ಸಹೋದರರು ಹಂಚಿಕೊಳ್ಳಬೇಕೆ ಹೊರತು ನನ್ನ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತನಿಗೆ ನನ್ನ ಯಾವುದೇ ಆಸ್ತಿಗಳಲ್ಲಿ ಹಕ್ಕು ಇರಕೂಡದು’ ಎಂದು ವೀಲುನಾಮೆಯಲ್ಲಿ ಉಲ್ಲೇಖಿಸಿದ್ದಾರೆ. 

ಈ ವಿಲುನಾಮೆಯನ್ನು ಕೊಲೆ ಪ್ರಕರಣದ ಆರೋಪ ಪಟ್ಟಿಯ 95ನೇ ದಾಖಲೆಯಾಗಿ ಪರಿಗಣಿಸಿದ್ದು, ಇದನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ವೇಳೆ ಸಾಕ್ಷ್ಯವಾಗಿ ಪರಿಗಣಿಸಿತ್ತು. ಅಲ್ಲದೆ ಈ ಕೊಲೆ ಪ್ರಕರಣದಲ್ಲಿ ಭಾಸ್ಕರ್ ಶೆಟ್ಟಿಗೆ ವೀಲುನಾಮೆ ಬರೆದುಕೊಟ್ಟ ನ್ಯಾಯವಾದಿಯವರು ವಿಚಾರಣೆಯ ವೇಳೆ ಸಾಕ್ಷಿ ಹೇಳಿದ್ದರು. ಕಾನೂನು ತಜ್ಞರ ಪ್ರಕಾರ, ಹಿಂದೂ ಅನುಕ್ರಮ ಕಾಯ್ದೆ 1956ರಂತೆ ಒಬ್ಬ ವ್ಯಕ್ತಿ ಕೊಲೆಗೀಡಾದಲ್ಲಿ ಆ ವ್ಯಕ್ತಿಯ ಕೊಲೆ ಮಾಡಿದವರು ಅಥವಾ ಕೊಲೆಗೆ ಪ್ರಚೋದನೆ ನೀಡಿದವರು ಮೃತ ವ್ಯಕ್ತಿಯ ಆಸ್ತಿಗೆ ವಾರಸುದಾರರಾಗಿದ್ದರೆ ಆ ಆಸ್ತಿಯ ಹಕ್ಕಿನಿಂದ ಅವರು ಅನರ್ಹರಾಗಿರುತ್ತಾರೆ ಎಂದು ಹೇಳುತ್ತಾರೆ.

ಮೂಲಗಳ ಪ್ರಕಾರ, ಭಾಸ್ಕರ್ ಶೆಟ್ಟಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜೇಶ್ವರಿ ಶೆಟ್ಟಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.ಇನ್ನು ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಿಬಿಡುವಿನಲ್ಲಿರುವ ಸರ್ವೇ ನಂಬ್ರ 114 ರಲ್ಲಿರುವ ಒಟ್ಟು 26 ಸೆಂಟ್ಸ್ ಸ್ಥಿರಾಸ್ತಿ ಹಾಗೂ ಅದರಲ್ಲಿ ಇರುವ ಶ್ರೀದುರ್ಗಾ ಇಂಟರ್‌ ನ್ಯಾಶನಲ್ ಹೊಟೇಲ್ ಕಟ್ಟಡ ಮತ್ತು ಅದರಲ್ಲಿ ಇರುವ ಬಾಡಿಗೆ ಅಂಗಡಿ ಕೋಣೆಗಳು. ನಗರದ ಮಸೀದಿ ರಸ್ತೆಯಲ್ಲಿರುವ ಸರ್ವೇ ನಂಬರ್ 120/14ರಲ್ಲಿನ 26 ಸೆಂಟ್ಸ್ ಜಾಗದಲ್ಲಿರುವ ಶಂಕರ್ ಬಿಲ್ಡಿಂಗ್ ಹೆಸರಿನ ವಾಣಿಜ್ಯ ಕಟ್ಟಡ, ಅದರಲ್ಲಿರುವ ಅಂಗಡಿ ಕೋಣೆ ಗಳು. ನಗರದ ಬಾಳಿಗ ಟವರ್ ಕಟ್ಟಡದಲ್ಲಿರುವ ಸುಮಾರು 210 ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಅಂಗಡಿ ಕೋಣೆ ಶಿವಳ್ಳಿ ಗ್ರಾಮದ ಇಂದ್ರಾಳಿಯಲ್ಲಿರುವ 4,500 ಚದರಡಿ ವಿಸ್ತೀರ್ಣದ ‘ಈಶ್ವರಿ’ ಹೆಸರಿನ ಅವರ ವಾಸದ ಮನೆ ಭಾಸ್ಕರ್ ಶೆಟ್ಟಿ ಅವರ ಸ್ಥಿರಾಸ್ತಿ ಗಳಾಗಿವೆ.

ಈ ನಡುವೆ ಕೊಲೆ ಪ್ರಕರಣದ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯ ಕುರಿತಾಗಿ ಅನೇಕ ಗೊಂದಲಗಳು ಸೃಷ್ಟಿಯಾಗಿದೆ. ಅದೇನೆಂದರೆ ಆರೋಪಿಗಳಿಗೆ ವಿಧಿಸಿರು  ಜೀವಾವಧಿ ಶಿಕ್ಷೆ ಅಂದರೆ ಅದು ಕೇವಲ 14 ವರ್ಷ ಜೈಲು ವಾಸವೇ ಅಥವಾ ಜೀವನ ಪರ್ಯಂತ (ಜೀವಿತಾವಧಿ) ಜೈಲುಶಿಕ್ಷೆಯೇ ಎಂಬುದು ಈ ಬಗ್ಗೆ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎಂ.ಶಾಂತಾರಾಮ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿ, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯವು ಜೀವಿತಾವಧಿ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅದರಂತೆ ಜೀವಾವಧಿ ಶಿಕ್ಷೆ ಅಂದರೆ ಅಪರಾಧಿಗಳು ಜೀವನ ಪರ್ಯಂತ ಜೈಲಿನಲ್ಲಿ ಇರಬೇಕು.ಆದರೆ, 14 ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಅಪರಾಧಿಯನ್ನು ಸನ್ನಡತೆ ಹಾಗೂ ಇತರ ಆಧಾರದಲ್ಲಿ ಬಿಡುಗಡೆಗೊಳಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದೆ. ಆದರೆ 14 ವರ್ಷ ಜೈಲುಶಿಕ್ಷೆ ಅನುಭವಿಸಿದ ಬಳಿಕ ಜೈಲಿನಿಂದ ಹೊರಬರುವುದು ನನ್ನ ಹಕ್ಕು ಎಂದು ಅಪರಾಧಿಗಳು ಭಾವಿಸಬಾರದು. ಅದೇರೀತಿ ಅಪರಾಧಿಗಳು ತನ್ನನ್ನು ಬಿಡುಗಡೆಗೊಳಿಸುವಂತೆ ನೇರವಾಗಿ ನ್ಯಾಯಾಲಯ ಅಥವಾ ಸರಕಾರದ ಮುಂದೆ ಅರ್ಜಿ ಕೂಡ ಸಲ್ಲಿಸುವಂತಿಲ್ಲ. ಇದು ಪೂರ್ಣ ಸರಕಾರದ ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ಅಪರಾಧಿಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!