ಉಡುಪಿ: ನಾನು ಶಾಸಕನಾಗಿ ಸರಕಾರಿ ಕಛೇರಿಗಳಿಗೆ ಮತ್ತು ಸರಕಾರಿ ಕಟ್ಟಡಗಳಲ್ಲಿರುವ ಸಾರ್ವಜನಿಕರ ದೂರಿನ ಪರಿಶೀಲನೆ ನಡೆಸಲು ಸ್ಥಳಕ್ಕೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಹಳೇಯ 50 ಬೆಡ್ ಗಳಿದ್ದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ನಾನು ಭೇಟಿ ನೀಡಿದಾಗ ನೆಲದಲ್ಲಿ ಗರ್ಭಿಣಿಯರನ್ನು ಮತ್ತು ಬಾಣಂತಿಯರನ್ನ ಮಲಗಿಸಿದ್ದು ಮಳೆಗಾಲದಲ್ಲಿ ನೀರು ಸೋರುತ್ತಿದ್ದ ಬಗ್ಗೆ ಮರುಕಗೊಂಡು ನಬಾರ್ಡ್ ಮೂಲಕ 10 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಲು ಪ್ರಯತ್ನಿಸಲಾಗಿತ್ತು ಆದರೆ ನಬಾರ್ಡ್ ಅನುದಾನವನ್ನು ನಗರ ಪ್ರದೇಶದಲ್ಲಿ ಬಳಸಿಕೊಳ್ಳಲು ಅವಕಾಶವಿಲ್ಲದೆ ಗ್ರಾಮಾಂತರಕ್ಕೆ ಮಾತ್ರ ಬಳಸಿಕೊಳ್ಳಬಹುದಾಗಿತ್ತು ಆದುದರಿಂದ ಆ ಹಣವನ್ನು ಬ್ರಹ್ಮಾವರ ಗ್ರಾಮಾಂತರದ ಆರೋಗ್ಯ ಸೇವೆಗಾಗಿ ಬ್ರಹ್ಮಾವರ ಸಮುದಾಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿತ್ತು.
ಆ ಸಂದರ್ಭದಲ್ಲಿ ನಾನು ಸರಕಾರಕ್ಕೆ ಜಿಲ್ಲಾಸ್ಪತ್ರೆ , ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಿದ್ದೆನು, ಡಾ. ಬಿ. ಆರ್ ಶೆಟ್ಟಿಯವರು 200 ಬೆಡ್ ಗಳ ಅಂತರಾಷ್ಟ್ರೀಯ ಗುಣಮಟ್ಟದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಕಟ್ಟಿಸಿ ಕೊಡುವುದಾಗಿ ಮುಂದೆ ಬಂದು ಸರಕಾರದೊಂದಿಗೆ ಚರ್ಚಿಸಿ ಸಂಪೂರ್ಣ ಉಚಿತವಾಗಿ ಗರ್ಬೀಣಿ ಮಹಿಳೆಯರು, ಬಾಣಂತಿ, ನವಜಾತ ಶಿಶುಗಳು ಮತ್ತು ಮಕ್ಕಳಿಗೆ ಆಸ್ಪತ್ರೆ ಕಟ್ಟಿಸಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿ, ಈ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆ ಮತ್ತು ಅಭಿವ್ರದ್ದಿಯ ವೆಚ್ಚಕ್ಕಾಗಿ ಸರಕಾರಕ್ಕೆ ಮನವಿ ಮಾಡಿದ ಮೇರೆಗೆ ಮಂಜೂರು ಮಾಡಿದ ಹಲವು ವರ್ಷಗಳ ಅವಧಿಗೆ ನೀಡಿದ ಗುತ್ತಿಗೆಯಾಧಾರದ ಜಮೀನಿನಲ್ಲಿ 400 ಬೆಡ್ ಗಳ ಮಲ್ಟಿ ಸ್ಪೇಷಿಯಾಲಿಟಿ ಆಸ್ಪತ್ರೆಯನ್ನು ಕಟ್ಟಿಸುವುದಾಗಿ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು. ಬಿ.ಆರ್ ಶೆಟ್ಟಿಯವರು ತನ್ನ ತಂದೆ ತಾಯಿಯ ಸ್ಮರಣಾರ್ಥ ನಿರ್ಮಿಸುತ್ತಿರುವ ಆಸ್ಪತ್ರೆಗೆ ದಾನಿಹಾಜಿ ಅಬ್ದುಲ್ಲಾ ರವರ ಹೆಸರನ್ನೂ ಇಡಬೇಕೆಂದು ತಿಳಿಸಿದ್ದೆನು.
ಶಿಥಿಲಾವಸ್ಥೆಯಲ್ಲಿದ್ದ ಹಳೇಯ ಕಟ್ಟಡವನ್ನು ಅಭಿವ್ರದ್ದಿಗೊಳಿಸಿ ಅಥವಾ ಹೊಸ ಕಟ್ಟಡದಲ್ಲಿ ಜನರಿಗೆ ಸೇವೆಯನ್ನು ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಬೇಕು ಎನ್ನುವ ಹಂಬಲದಿಂದ ಅತ್ಯಾಧುನಿಕ ಸೌಲಭ್ಯಗಳುಳ್ಳ ಸುಸಜ್ಜಿತ ಮತ್ತು ವ್ಯವಸ್ಥಿತ ಆಸ್ಪತ್ರೆಯಲ್ಲಿ ಉಚಿತವಾಗಿ ಜಿಲ್ಲೆಯ ಬಡ ಮಹಿಳೆಯರು ಮತ್ತು ನವಜಾತ ಶಿಶುಗಳಿಗೆ ಮತ್ತು ಮಕ್ಕಳಿಗೆ ಚಿಕಿತ್ಸೆ ದೊರಕಿಸಿಕೊಡಬೇಕೆಂಬುದಾಗಿತ್ತು.
ಸುಸಜ್ಜಿತ ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸಂಪೂರ್ಣ ಉಚಿತವಾಗಿ ಯಾವುದೇ ಬಿಲ್ಲಿಂಗ್ ಇಲ್ಲದೇ ಪಂಚತಾರಾ ವ್ಯವಸ್ಥೆಯಲ್ಲಿ 10,000 ಕ್ಕೂ ಹೆಚ್ಚು ಮಕ್ಕಳ ಜನನವಾಗಿರುವುದಕ್ಕೆ, 1,50,000 ಹೆಚ್ಚು ಹೊರರೋಗಿಗಳು ಚಿಕಿತ್ಸೆ ಪಡೆದಿದ್ದಾರೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ.
ನನಗೆ ಕೇವಲ ಜನರಿಗೆ ವ್ಯವಸ್ಥಿತವಾಗಿ ಸುಸಜ್ಜಿತವಾಗಿ ಆಸ್ಪತ್ರೆಯನ್ನು ನಿರ್ಮಿಸಿಕೊಡಬೇಕೆಂಬ ಹಂಬಲವಿತ್ತು, ಅದನ್ನ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿತ್ತು. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಬಿ. ಆರ್ ಶೆಟ್ಟಿ ಸಂಸ್ಥೆಯವರು ನಿರ್ಮಿಸಿದ್ದ 200 ಬೆಡ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸರಕಾರಕ್ಕೆ ದಾನವಾಗಿ ನೀಡುವುದಾಗಿ ತಿಳಿಸಿದ್ದಾರೆ.
ಯಾರು ಬೇಕಿದ್ದರೂ ನಡೆಸಲಿ ಅಥವಾ ಮುಂದುವರಿಸಲಿ, ಈಗಿರುವುದಕ್ಕಿಂತಲೂ ಉತ್ತಮ ಸೇವೆ ಮುಂದುವರಿಯಲಿ ಎಂಬುದು ನನ್ನ ಹಾರೈಕೆ ಮತ್ತು ಅಭಿಪ್ರಾಯ. ಹಾಗಾಗಿ ಸಾರ್ವಜನಿಕರ ಸೇವೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೇ ಅದನ್ನು ಸರಕಾರ ಪಡೆದು ಈಗಿರುವ ಸುಸುಜ್ಜಿತ ಮತ್ತು ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲಿ.
ನನಗೆ ಕೇವಲ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗದಂತೆ ಆರೋಗ್ಯ ಸೇವೆ ಮುಂದುವರಿಯಬೇಕು ಎನ್ನುವುದು ನನ್ನ ಅಭಿಪ್ರಾಯ. ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ ಗಳು, ಲ್ಯಾಬ್ ಟೆಕ್ನಿಷಿಯನ್ಸ್ ಗಳು, ತಾಂತ್ರಿಕ ಸಿಬ್ಬಂದಿಗಳು ಮತ್ತು ಇತರೇ ಎಲ್ಲಾ ಸಿಬ್ಬಂದಿಗಳಿಗೆ ಸೇವಾ ಭದ್ರತೆಯನ್ನು ಒದಗಿಸಿ, ಅವರನ್ನು ಸೇವೆಯಲ್ಲಿ ಮುಂದುವರಿಸಬೇಕು ಎನ್ನುವುದು ನನ್ನ ಆಗ್ರಹ. | | |