ಕೋವಿನ್ ಪೋರ್ಟಲ್ ಹ್ಯಾಕ್ ಆಗಿಲ್ಲ- ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್-19 ಲಸಿಕೆಗಾಗಿ ನೋಂದಣಿ ಪ್ರಕ್ರಿಯೆ ನಡೆಯುವ ಕೋವಿನ್ ಪೋರ್ಟಲ್ ಹ್ಯಾಕ್ ಆಗಿದೆ ಎಂಬ ಮಾಧ್ಯಮ ವರದಿಗಳಿನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ಕೋವಿನ್ ಪೋರ್ಟಲ್ ಹ್ಯಾಕ್ ಆಗಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಮತ್ತು ಪೋರ್ಟಲ್ ನಲ್ಲಿನ ಎಲ್ಲಾ ವ್ಯಾಕ್ಸಿನೇಷನ್ ಡೇಟಾಗಳು ಸುರಕ್ಷಿತವಾಗಿದ್ದು, ಸುರಕ್ಷಿತ ಡಿಜಿಟಲ್ ಪರಿಸರದಲ್ಲಿ  ಸಂಗ್ರಹಿಸುತ್ತದೆ ಎಂದು ಹೇಳಿದೆ. 

ಆದಾಗ್ಯೂ, ಸಚಿವಾಲಯವು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಲಸಿಕೆ ಆಡಳಿತದ ಅಧಿಕಾರ ಗುಂಪು (ಇಜಿವಿಎಸಿ) ಈ ವಿಷಯವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಟಿವೈ) ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು ತನಿಖೆ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ  ತಿಳಿಸಿದೆ.

ಕೋವಿನ್ ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿನ ಸುದ್ದಿಗಳು ಸುಳ್ಳು. ಕೋವಿನ್ ಪೋರ್ಟಲ್ ನ ದತ್ತಾಂಶಗಳನ್ನು ಹೊರಗಿನ ಯಾವುದೇ ಘಟಕದೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಕೋವಿನ್ ಎಂಪಾವರ್ಡ್ ಗ್ರೂಪ್‌ನ ಅಧ್ಯಕ್ಷ ಡಾ.ಆರ್.ಎಸ್.ಶರ್ಮಾ ಅವರು  ಸ್ಪಷ್ಟಪಡಿಸಿದರು.

ಇನ್ನು ಕೋವಿನ್ ಪೋರ್ಟಲ್ ನಲ್ಲಿನ ಲಸಿಕೆ ಫಲಾನುಭವಿಗಳ ಜಿಯೋ-ಲೊಕೇಶನ್‌ನಂತಹ ಡೇಟಾ ಸೋರಿಕೆಯಾಗಿದೆ ಎಂದು ಊಹಾಪೋಹಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

Leave a Reply

Your email address will not be published. Required fields are marked *

error: Content is protected !!