ದೈವದ ಚಾಕ್ರಿ ವರ್ಗಕ್ಕೆ ಕೋವಿಡ್ ಪರಿಹಾರ ಘೋಷಿಸಿ- ಮಹೇಶ್ ಪೂಜಾರಿ ಹೂಡೆ

ಉಡುಪಿ: ಪರಶುರಾಮ ಸೃಷ್ಟಿಯ ತುಳುನಾಡಿನ ಸಾವಿರಾರು ವರ್ಷಗಳ ಇತಿಹಾಸ ಇರುವ ದೈವಸ್ಥಾನ ಸುಮಾರು ಇದೆ ಅದರಲ್ಲಿ ಆ ಗ್ರಾಮದ ದೈವ ಸ್ಥಾನದಲ್ಲಿ ದೈವಚಾಕ್ರಿ ಮಾಡುವ ವರ್ಗಗಳು ಹಲವಾರು ಇವೆ ಈ ಒಂದು ಎರಡು ವರ್ಷದಲ್ಲಿ ಕೋರನ ಎಂಬ ಮಹಾರೋಗದ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದ ಹಾಗೂ ಎಲ್ಲಾ ಕಾರ್ಯಗಳನ್ನು ಸರ್ಕಾರ ರದ್ದು ಮಾಡಿದೆ ಆದರಿಂದ ದೈವ ಚಾಕ್ರಿ ಸದಸ್ಯರು ತುಂಬಾ ಸಂಕಷ್ಟದಲ್ಲಿದ್ದಾರೆ.

ತುಳುನಾಡಿನ ದೈವಚಾಕ್ರಿ ವರ್ಗದವರಿಗೆ ಈ ಬಾರಿಯ ಹಾಗೂ ಹೋದ ವರ್ಷದ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ಕೈ ಬಿಟ್ಟಿದೆ ಹಲವಾರು ಸಾರಿ ಮನವಿ ಕೊಟ್ಟು ಸೋತು ಹೋಗಿದ್ದೇವೆ ಕರಾವಳಿಯಲ್ಲಿ ಹಲವಾರು ವರ್ಗಗಳು ದೈವಾರಾಧನೆ ಕುಲಕಸುಬಾಗಿ ಅವಲಂಬಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಧ್ಯಸ್ಥರು, ಮುಕ್ಕಾಲ್ದಿ ದರ್ಶನ ಪಾತ್ರಿಗಳು ಮಡಿವಾಳರು ನಾಗಸ್ವರ ವಾದಕರು, ಬ್ಯಾಂಡ್ ವಾದಕರು, ಕೊರಗ ಸಮುದಾಯ, ಪಂಬದ ಸಮುದಾಯ, ನಲಿಕೆ ಸಮುದಾಯ, ಪರವ ಸಮುದಾಯ, ಬಬ್ಬುಸ್ವಾಮಿ ಕೂಡುಕಟ್ಟು, ಗರಡಿ ಕೂಡುಕಟ್ಟು ಹೀಗೆ ಹಲವಾರು ವರ್ಗಗಳಿವೆ ದಯಮಾಡಿ ಇವರ ಪರವಾಗಿ ಮೂರನೇ ಪ್ಯಾಕೇಜ್ ಘೋಷಣೆ ಮಾಡಬೇಕಾಗಿ ಹಾಗೂ ಮುಂದಿನ ದಿನಗಳಲ್ಲಿ ದೈವಾರಾಧನೆಗೆ ಅತಿ ಶೀಘ್ರದಲ್ಲಿ ನಡೆಸಲು ಅನುಮತಿ ಕೊಡಬೇಕಾಗಿ ಮುಖ್ಯಮಂತ್ರಿಗಳಿಗೆ  ಶಾಸಕರು ಸಂಸದರು ಉಸ್ತುವಾರಿ ಸಚಿವರು ಧಾರ್ಮಿಕ ದತ್ತಿ ಇಲಾಖೆ ಸಚಿವರು ಮನವಿ ಮಾಡಬೇಕಾಗಿ ಉಡುಪಿ ಹೆಲ್ಪ್ ಲೈನ್ ಅಧ್ಯಕ್ಷ ಮಹೇಶ್ ಪೂಜಾರಿ ಹೂಡೆ ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!