ದ.ಕ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಜೂ.14ರ ಬಳಿಕವೂ ಲಾಕ್ ಡೌನ್ ಮುಂದುವರಿಕೆ
ಬೆಂಗಳೂರು,ಜೂ.10(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವ 8 ಜಿಲ್ಲೆಗಳಲ್ಲಿ ಜೂ.14ರ ಬಳಿಕವೂ ಲಾಕ್ ಡೌನ್ ಅನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕೋವಿಡ್ ಸೋಂಕಿನ ಪ್ರಮಾಣ ನಿರೀಕ್ಷಿತ ಮಟ್ಟಿನ ಇಳಿಕೆ ಕಾಣದ ಪರಿಣಾಮ 8 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಲಾಕ್ ಡೌನ್ ಅನ್ನು ವಿಸ್ತರಿಸುವಂತೆ ಒತ್ತಾಯಿಸಿದ್ದರ ಪರಿಣಾಮ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.19.04 ಆಗಿದ್ದು, ಉತ್ತರ ಕನ್ನಡ ದ ಪಾಸಿಟಿವಿಟಿ ಪ್ರಮಾಣವು 19ರಿಂದ 14.48ಕ್ಕೆ ಇಳಿದಿದೆ. ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯು ಶೇ.25.2 ರಷ್ಟು ಪಾಸಿಟಿವಿಟಿ ರೇಟ್‌ನೊಂದಿಗೆ ಕೊನೆಯ ಸ್ಥಾನದಲ್ಲಿದೆ. ಉಳಿದಂತೆ ದಾವಣಗೆರೆ (24.4), ಮೈಸೂರು (22.49), ಚಾಮರಾಜನಗರ (19.68) ನಂತರ ಸ್ಥಾನದಲ್ಲಿದೆ. ಹಾಗೂ ಐದು ದಿನಗಳಲ್ಲಿ ಕೊಡಗಿನ ಪಾಸಿಟಿವಿಟಿ ಪ್ರಮಾಣ ಶೇ.19.09 ಆಗಿದೆ ಎಂದು ತಿಳಿಸಿದೆ.
ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ತುಮಕೂರು, ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಅನ್ನು ಒಂದು ವಾರ ವಿಸ್ತರಿಸಲಾಗುವುದು. ಇದಲ್ಲದೆ ಇದರ ಜಿಲ್ಲೆಗಳಲ್ಲಿ ಕೊವೀಡ್ ಪರಿಸ್ಥಿತಿ ಅವಲೋಕಿಸಿ ಲಾಕ್ ಡೌನ್ ಸಡಿಲಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ.