ಬೈರಂಪಳ್ಳಿ ಶ್ರಮಿಕ ತರುಣರ ತಂಡ: 2 ಲಕ್ಷ ರೂ. ಮೌಲ್ಯದ ಆಹಾರ ಕಿಟ್ ವಿತರಣೆ
ಉಡುಪಿ ಜೂ.10(ಉಡುಪಿ ಟೈಮ್ಸ್ ವರದಿ): ಬೈರಂಪಳ್ಳಿಯ ಶ್ರಮಿಕ ತರುಣರ ತಂಡದ ವತಿಯಿಂದ ಅಶಕ್ತರಿಗೆ ಹಾಗೂ ಸಂಕಷ್ಟ ದಲ್ಲಿರುವವರಿಗೆ 2 ಲಕ್ಷ ರೂ. ಮೌಲ್ಯದ 200 ಆಹಾರ ಮತ್ತು ದಿನ ಬಳಕೆ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಯಿತು.
ತಂಡದ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಬೈರಂಪಳ್ಳಿ ಮತ್ತು ಅಧ್ಯಕ್ಷ ಪ್ರಕಾಶ್ ಕುಲಾಲ್ ನೇತೃತ್ವದಲ್ಲಿ ಶ್ರಮಿಕ ತಂಡವು ವೃದ್ಧ ದಂಪತಿ ಕುಟುಂಬ, ಅಂಗವಿಕಲ ಸದಸ್ಯ ಇರುವ ಕುಟುಂಬ, ಹೋಟೆಲ್ ಕಾರ್ಮಿಕರು, ಪೌರ ಕಾರ್ಮಿಕರು, ಕೆಲಸ ಇಲ್ಲದೆ ಅಸಾಹಯಕರಾಗಿರುವ ಕುಟುಂಬ, ಆಶಾ ಕಾರ್ಯಕರ್ತೆಯರು, ಸೋಂಕಿತ ಕುಟುಂಬ ಮತ್ತು ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸಹಾಯ ಹಸ್ತದೊಂದಿಗೆ ಸೇವೆ ಮಾಡಬೇಕೆಂದು ನಿರ್ಧರಿಸಿತ್ತು.
ಈ ನಿಟ್ಟಿನಲ್ಲಿ ತಂಡದ ಸರ್ವ ಸದಸ್ಯರು ಸೇರಿ, ಪರಿಚಿತ ದಾನಿಗಳ ನೆರವಿನಿಂದ ಹಾಗೂ ತಂಡದ ಅನುದಾನವನ್ನು ಒಟ್ಟುಗೂಡಿಸಿ 2 ಲಕ್ಷ ಮೌಲ್ಯದ 200 ಆಹಾರ ಮತ್ತು ದಿನ ಬಳಕೆ ಸಾಮಗ್ರಿಗಳ ಕಿಟ್ಗಳನ್ನು ತಯಾರಿಸಿ ಬೈರಂಪಳ್ಳಿ, ಶಿವಪುರ, ಕುಕ್ಕೆಹಳ್ಳಿ, ಪೆರ್ಡೂರು ವ್ಯಾಪ್ತಿಯ ಕುಟುಂಬಗಳಿಗೆ ವಿತರಿಸಲಾಯಿತು. ಹಾಗೂ ತಮ್ಮ ಕಾರ್ಯಕ್ಕೆ ಸಹಕರಿಸಿದ ದಾನಿಗಳಿಗೆ ತಂಡದ ವತಿಯಿಂದ ಧನ್ಯವಾದವನ್ನು ಸೂಚಿಸಲಾಗಿದೆ. ಈ ಕಾರ್ಯದಲ್ಲಿ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.