| ಉಡುಪಿ ಜೂ.10(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಪಾಸಿಟಿವಿಟಿ ಪ್ರಮಾಣವು ಕಳೆದ ಕೆಲ ದಿನಗಳಿಂದ 14.66 ಕ್ಕೆ ಇಳಿಕೆ ಯಾಗಿದೆ ಎಂದು ಕರ್ನಾಟಕ ಕೋವಿಡ್ ವಾರ್ ರೂಮಿನ ದೈನಂದಿನ ವರದಿ ತಿಳಿಸಿದೆ.
ರಾಜ್ಯದ ಜಿಲ್ಲಾವಾರು ಪಾಸಿಟಿವಿಟಿ ದರದ ಬಗ್ಗೆ ವರದಿ ಮಾಡಿರುವ ರಾಜ್ಯ ಕೋವಿಡ್ ವಾರ್ ರೂಮ್ ನ ವರದಿಯಲ್ಲಿ ರಾಜ್ಯದ ಪಾಸಿಟಿವಿಟಿ ಪ್ರಮಾಣವು ಶೇ. 9.76 ರಷ್ಟಿದೆ ಎಂದು ತಿಳಿಸಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ.19.04 ಆಗಿದ್ದು, ಉತ್ತರ ಕನ್ನಡ ದ ಪಾಸಿಟಿವಿಟಿ ಪ್ರಮಾಣವು 19ರಿಂದ 14.48ಕ್ಕೆ ಇಳಿದಿದೆ.
ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯು ಶೇ.25.2 ರಷ್ಟು ಪಾಸಿಟಿವಿಟಿ ರೇಟ್‌ನೊಂದಿಗೆ ಕೊನೆಯ ಸ್ಥಾನದಲ್ಲಿದೆ. ಉಳಿದಂತೆ ದಾವಣಗೆರೆ (24.4), ಮೈಸೂರು (22.49), ಚಾಮರಾಜನಗರ (19.68) ನಂತರ ಸ್ಥಾನದಲ್ಲಿದೆ. ಹಾಗೂ ಐದು ದಿನಗಳಲ್ಲಿ ಕೊಡಗಿನ ಪಾಸಿಟಿವಿಟಿ ಪ್ರಮಾಣ ಶೇ.19.09 ಆಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲೀಗ ಬೆಂಗಳೂರು ನಗರ ಸೇರಿದಂತೆ ಒಟ್ಟು ಐದು ಜಿಲ್ಲೆಗಳ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕೆಳಕ್ಕಿದಿದೆ. ಈ ಪೈಕಿ ಬೀದರ್ ನಲ್ಲಿ ಅತೀ ಕಡಿಮೆ ಪಾಸಿಟಿವಿಟಿ ದರ ಕಂಡುಬಂದಿದೆ. ಅದರಂತೆ ಬೀದರ್ ಶೇ.0.67, ಕಲಬುರ್ಗಿ ಶೇ.2.80, ಹಾವೇರಿ ಶೇ.3.28, ಬೆಂಗಳೂರು ನಗರ ಶೇ.4.80 ಹಾಗೂ ಯಾದಗಿರಿ ಶೇ.5 ರಷ್ಟಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಶೀಘ್ರವೇ ಲಾಕ್‌ಡೌನ್ ರಿಯಾಯಿತಿಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದ
ರಾಜ್ಯದಲ್ಲಿ ಈಗಲೂ 30ರಿಂದ 39 ವರ್ಷದೊಳಗಿನವರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. 20ರಿಂದ 29 ವಯೋಮಾನದವರು ಎರಡನೇ ಸ್ಥಾನದಲ್ಲಿದ್ದು, 40ರಿಂದ 49 ವಯೋಮಾನದವರು ಮೂರನೇ ಸ್ಥಾನದಲ್ಲಿದ್ದಾರೆ. 50ರಿಂದ 59, 60ರಿಂದ 69, 10ರಿಂದ 19ವಯೋಮಾನದವರು ನಂತರದ ಸ್ಥಾನಗಳಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. | |