ಉಡುಪಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಬಂಗೇರ(ಪದ್ದು) ಕೋವಿಡ್ ಸೋಂಕಿಗೆ ಬಲಿ
ಉಡುಪಿ ಜೂ.10(ಉಡುಪಿ ಟೈಮ್ಸ್ ವರದಿ): ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಪದ್ದು ಬಂಗೇರ ಅವರು ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆ.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ 74 ವರ್ಷದ ಶೇಖರ್ ಪದ್ದು ಬಂಗೇರ ಅವರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಂಬತ್ತರ ದಶಕದಲ್ಲಿ ದೇಶದ ಫುಟ್ಬಾಲ್ ತಂಡವನ್ನು ಮುನ್ನಡೆಸಿದ್ದ ಶೇಖರ್ ಪದ್ದು ಬಂಗೇರ ಅವರು ಮೂಲತಃ ಉಡುಪಿಯ ಬಡಾನಿಡಿಯೂರಿನವರು. ಇವರು ಭಾರತ ತಂಡದ ಗೋಲ್ ಕೀಪರ್ ಹಾಗೂ ಕ್ಯಾಪ್ಟನ್ ಕೂಡ ಆಗಿದ್ದರು. ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದ ಅವರು, ಹಲವು ಪ್ರತಿಷ್ಠಿತ ಕ್ಲಬ್ – ಸಂಸ್ಥೆಗಳಲ್ಲಿ ಕೋಚ್ ಆಗಿ ಕೂಡಾ ಸೇವೆ ಸಲ್ಲಿಸಿದ್ದಾರೆ.
ಮೃತರ ಅಂತಿಮ ವಿಧಿವಿಧಾನ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಇಂದು ನಡೆಯಿತು. ಈ ಸಂದರ್ಭ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಟ್ರಸ್ಟಿ ಹಾಗೂ ತರಬೇತುದಾರ ಕ್ಲೈವ್ ನೋಲನ್ ಮಸ್ಕರೇನ್ಹಾಸ್ ಮತ್ತು ಮಿಲಾನಾ ಉಪಸ್ಥಿತರಿದ್ದರು.