ಕೋಟತಟ್ಟು: ಗ್ರಾ.ಪಂಚಾಯತ್ ಜೂ.14 ರವರೆಗೆ ಸಂಪೂರ್ಣ ಲಾಕ್ ಡೌನ್

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆ ಪಂಚಾಯತ್ ವ್ಯಾಪ್ತಿಯ ಎಲ್ಲಾ ಭಾಗಗಳ ಅಂಗಡಿ ಮುಂಗಟ್ಟು ಇಂದಿನಿಂದ ಮುಚ್ಚಿಸಿ ಜೂ.14 ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.

ಬುಧವಾರ ಕೋಟತಟ್ಟು ಗ್ರಾಮಪಂಚಾಯತ್ ಸಭಾಂಗಣದಲ್ಲಿ ಕರೆಯಲಾದ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ ಇಡೀ ಗ್ರಾಮವನ್ನು ಸೀಲ್ ಡೌನ್ ಗೊಳಿಸುವ ಬಗ್ಗೆ ಮಾಹಿತಿ ತಿಳಿಸಿದ ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋಟತಟ್ಟು ಗ್ರಾಮದ ಒಂದೇ ವ್ಯಾಪ್ತಿಯ ಪಡುಕರೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು ಒಟ್ಟು ಬುಧವಾರ 48 ಪ್ರಕರಣಗಳು ಪತ್ತೆಯಾಗಿದ್ದು, ಇನ್ನು ಹಲವರ ವರದಿ ಬಾಕಿ ಇದ್ದ ಹಿನ್ನಲ್ಲೆಯಲ್ಲಿ ಜನಸಾಮಾನ್ಯರ ಹಿತದೃಷ್ಠಿ ಯಿಂದ ಸೀಲ್ ಡೌನ್ ಗೊಳಿಸಲಾಗುತ್ತದೆ ಎಂದರು.

ಆ ಪ್ರಯುಕ್ತ ಗುರುವಾರ 6 ರಿಂದ12 ರ ತನಕ ದಿನಸಿ ತರಕಾರಿ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು ಇನ್ನುಳಿದ 5 ದಿನ ಅಂದರೆ 14ರ ವರೆಗೆ ತಮ್ಮ ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಅಥವಾ ಅನಗತ್ಯವಾಗಿ ತಿರುಗಾಡದಂತೆ ಎಚ್ಚರಿಕೆ ನೀಡುತ್ತಿದ್ದೇನೆ. ಈ ಕುರಿತು ಜನರಿಗೆ ಮೈಕ್ ಮೂಲಕ ಮಾಹಿತಿ ,ಅಗತ್ಯ ವಸ್ತುಗಳನ್ನು ಇನ್ನುಳಿದ ದಿನಗಳಲ್ಲಿ ಖರೀದಿಸಲು ತಮ್ಮ ಕಾರ್ಯಪಡೆ ಸಹಕರಿಸಲು ಸೂಚಿಸಿದ್ದಾರೆ.

ಸೀಲ್ ಡೌನ್ ಹಿನ್ನೆಲೆಯಲ್ಲಿ ದಿನಸಿ ಖರೀದಿಗೆ ಓಡಿದ ಜನರು
ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸೀಲ್ ಡೌನ್ ಗೊಳಿಸುವ ಸುದ್ಧಿ ಹರಡುತ್ತಿದ್ದಂತೆ ಆಯಾ ಭಾಗದ ಸಾರ್ವಜನಿಕರು ಅಂಗಡಿ ಬಾಗಿಲು ತೆರೆಸಿ ದಿನಸಿ ಖರೀದಿಸಲು ಅಣಿಯಾದರು. ಈ ಬಗ್ಗೆ ಪಂಚಾಯತ್ ಕಾರ್ಯಪಡೆ ಗರಂ ಆದ ಘಟನೆ ಬುಧವಾರ ಸಂಭವಿಸಿತು.

ಪಂಚಾಯತ್ ಮನವಿ
ಗ್ರಾಮ ಸೀಲ್ ಡೌನ್ ಹಿನ್ನಲ್ಲೆಯಲ್ಲಿ ಪಂಚಾಯತ್ ಕಾರ್ಯಪಡೆ ಜನರು ಸೀಲ್ ಡೌನ್ ಗೆ ಸಹಕರಿಸುವಂತೆ ಮನವಿ ಮಾಡಿದೆ. ಅಗತ್ಯ ವಿಚಾರಗಳಾದ ಮೆಡಿಕಲ್, ಅಗತ್ಯವಿದ್ದವರಿಗೆ ಆಸ್ಪತ್ರೆ ಸಂಚಾರ, ನರೇಗಾ ಯೋಜನೆಯ ಕಾರ್ಯನಿರ್ವಹಿಸುವವರಿಗೆ ,ಕೃಷಿ ಕಾರ್ಯಗಳಿಗೆ, ಸ್ಥಳೀಯ ರಸ್ತೆ ಇನ್ನಿತರ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ , ಲಾಕ್ ಡೌನ್ ಊಟೋಪಚಾರ ನೀಡುವವರಿಗೆ ಸೀಲ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಇನ್ನುಳಿದಂತೆ ಅನಗತ್ಯವಾಗಿ ಅಂಗಡಿ ತೆರೆಯುವ ,ಸೊಸೈಟಿಗಳಲ್ಲಿ ಕಾರ್ಯನಿರ್ವ ಹಿಸುವ, ಕಂಪನಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಹೊರಬರದಂತೆ ಸೂಚಿಸಲಾಗಿದೆ.ಮೆಡಿಕಲ್ ಹಾಗೂ ಹೋಟೆಲ್ ಪಾರ್ಸೆಲ್‌ಗೆ ಅವಕಾಶ ಗ್ರಾಮದಲ್ಲು ಕಾರ್ಯನಿರ್ವಹಿಸುವ ಮೆಡಿಕಲ್ ಹಾಗೂ ಹೋಟೆಲ್ ಗಳಿಗೆ ಪಾರ್ಸೆಲ್ ಕೊಡಲು ಅವಕಾಶಕಲ್ಪಿಸಲಾಗಿದೆ, ಹಾಲು ಡೈರಿಗಳಲ್ಲಿ ಅಧಿಕ ಸಮಯ ನೀಡದಂತೆ ಸೂಚಿಸಲಾಗಿದೆ.ಪೋಲಿಸ್ ಇಲಾಖೆ ಸಹಕಾರದಲ್ಲಿ ಆಯಾ ಭಾಗಗಳಲ್ಲಿ ಗೇಟ್ ಅಳವಡಿಸಿ ಬಿಗಿ ಬಂದೋಬಸ್ತಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಅಭಿವೃದ್ಧಿ ಅಧಿಕಾರಿ ಶೈಲಜಾ ಎಸ್ ಪೂಜಾರಿ, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ,ಕಂದಾಯ ಅಧಿಕಾರಿ ರಾಜು,ಗ್ರಾಮ ಲೆಕ್ಕಿಗ ಚಲುವರಾಜು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!