ಮಂಗಳೂರು: ಕೊರೊನಾಗೆ ಮತ್ತಿಬ್ಬರು ಬಲಿ

ಮಂಗಳೂರು, ಜೂ.28 : ಜಿಲ್ಲೆಯಲ್ಲಿ ಕೊರೊನಾಗೆ ಭಾನುವಾರ ಇಬ್ಬರು ಬಲಿಯಾಗಿದ್ದಾರೆ.


ಬಂಟ್ವಾಳದ 57 ವರ್ಷದ ವೃದ್ದೆ ಹಾಗೂ ಸುರತ್ಕಲ್‌ನ ಇಡ್ಯಾ ನಿವಾಸಿ 31 ವರ್ಷದ ಯುವಕ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದರೆಂದು ತಿಳಿದು ಬಂದಿದೆ.

ಕೊರೊನಾ ಸೋಂಕು ದೃಢಪಟ್ಟಿದ್ದ ಮಹಿಳೆಯು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಹಾಗೂ ಯುವಕ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

Leave a Reply

Your email address will not be published. Required fields are marked *

error: Content is protected !!