ಉಡುಪಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಸಿಬ್ಬಂದಿ ಕೋವಿಡ್’ಗೆ ಬಲಿ
ಉಡುಪಿ ಜೂ.9(ಉಡುಪಿ ಟೈಮ್ಸ್ ವರದಿ): ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯ ಸಿಬ್ಬಂದಿಯೊಬ್ಬರು ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ.
ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ ಕ್ಲರ್ಕ್ ವೆಂಕಟೇಶ್ (33)ಮೃತಪಟ್ಟವರು. ಕಳೆದ 15 ದಿನಗಳಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಛೇರಿಯಲ್ಲಿ ಪ್ರೌಢಶಾಲಾ ವಿಭಾಗ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿಷಯಗಳನ್ನು ನಿರ್ವಹಿಸುತ್ತಿದ್ದ ಇವರು ಇತರೆ ಯಾವುದೇ ವಿಭಾಗದ ಕೆಲಸ ಕೊಟ್ಟಾಗಲೂ ನಿಷ್ಟೆಯಿಂದ ನಿರ್ವಹಿಸುವ ಮನೋಭಾವ ಹೊಂದಿದ್ದರು. ಕಛೇರಿಯ ಸಿಬ್ಬಂದಿಗಳೆಲ್ಲರೂ ಒಗ್ಗಟ್ಟು, ಸಮನ್ವಯತೆ ಮತ್ತು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಇವರ ಅಗಲಿಕೆ ಒಂದು ಬಲಿಷ್ಠ ತಂಡದ ಕೊಂಡಿ ಕಳಚಿದಂತಾಗಿದೆ. ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎನ್ನುತ್ತಾರೆ ಅವರ ಸಹೋದ್ಯೋಗಿಗಳು.
ಮೃತರು ಪತ್ನಿ, 9 ತಿಂಗಳ ಹಸುಗೂಸುವನ್ನು ಅಗಲಿದ್ದಾರೆ.