ಉಡುಪಿ: ವೇತನ ಪಾವತಿಸದ ಬಿಆರ್’ಎಸ್ ಆಸ್ಪತ್ರೆ- ಸಿಬ್ಬಂದಿಗಳ ಪ್ರತಿಭಟನೆ

ಉಡುಪಿ ಜೂ.9(ಉಡುಪಿ ಟೈಮ್ಸ್ ವರದಿ): ಉಡುಪಿಯ ಬಿಆರ್ ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ವೇತನ ಬಾಕಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಕಳೆದ 3 ತಿಂಗಳಿನಿಂದ ವೇತನ ಬಾಕಿ ಇರುವ ಕಾರಣ ಆಸ್ಪತ್ರೆಯ ಎಲ್ಲಾ ವಿಭಾದ ಸುಮಾರು 50 ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಆಸ್ಪತ್ರೆಯ ಮುಂಭಾಗದಲ್ಲಿ ಧರಣಿ ಕೂತಿದ್ದಾರೆ. ಈ ಧರಣಿಯಲ್ಲಿ ವೈದ್ಯರು, ನರ್ಸ್ ಗಳು, ನಿರ್ವಹಣೆ ವಿಭಾಗ ಹೀಗೆ ಎಲ್ಲಾ ವಿಭಾದ ಸಿಬ್ಬಂದಿಗಳೂ ಇದ್ದು, ಕಳೆದ 3 ತಿಂಗಳಿನಿಂದ ಯಾವುದೇ ವೇತನ ಸಿಕ್ಕಿಲ್ಲ ಹಾಗೂ ಕಳೆದ ವರ್ಷದ ಅಕ್ಟೋಬರ್ ನಿಂದ ಪಿಎಫ್ ಐಯನ್ನೂ ಹೋಲ್ಡ್ ನಲ್ಲಿ ಇಟ್ಟಿದ್ದಾರೆ. ವೇತನ ನೀಡುವ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಆದರೆ ಇನ್ನೂ ಕೆಲಸ ಮಾಡಿ ಎನ್ನುತ್ತಿದ್ದಾರೆ ಎಂದು ಧರಣಿ ನಿರತರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!