ಜನಪ್ರತಿನಿಧಿಗಳಿಗೆ ಅಧಿಕಾರವೇ ಮುಖ್ಯ ಹೊರತು, ಮತದಾರರ ಹಿತಾಸಕ್ತಿ ಬೇಕಾಗಿಲ್ಲ- ಜಯರಾಂ ಅಂಬೆಕಲ್ಲು
ಉಡುಪಿ: ಇತ್ತೀಚಿಗೆ ಅಧಿಕಾರಕ್ಕಾಗಿ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ನಿಜವಾಗಿಯೂ ನಾಚಿಕೆ ಯಾಗುತ್ತದೆ. ಕೋವಿಡ್- 19 ನಿಂದ ಕಳೆದ ಒಂದುವರೆ ವರ್ಷದಿಂದ ರಾಜ್ಯದ ಜನರು ಹೈರಾಣರಾಗಿದ್ದಾರೆ. ಅದರಲ್ಲೂ ಮಧ್ಯಮವರ್ಗ, ಬಡವರನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ಹಾವಳಿಯಿಂದ ನಾವುಗಳು ಬದುಕಬಲ್ಲೆವೇ? ಎಂಬ ಭಯದಲ್ಲಿ ಇರುವ ಮತದಾರರಿಗೆ ಧೈರ್ಯ ತುಂಬುವ ಬದಲು, ಇಂಥಾ ತುರ್ತುಪರಿಸ್ಥಿತಿಯಲ್ಲಿಯೂ ತಮ್ಮ ಅಧಿಕಾರದ ಆಸೆಗಾಗಿ ಮುಖ್ಯಮಂತ್ರಿ ಯನ್ನು ಬದಲಾಯಿಸಲು ಹೊರಟಿರುವುದು ನಾಚಿಕೆಯಾಗಬೇಕು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನಸೇವಕರೇ ಹೊರತು ರಾಜನಲ್ಲ!, ಎಂಬುದನ್ನು ಮನಗಾಣಬೇಕು.
ಜನರ ಹಿತಾಸಕ್ತಿಗಿಂತ ಅಧಿಕಾರವೇ ನಿಮಗೆ ಮುಖ್ಯವಾದರೆ, ಕೂಡಲೇ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಮರು ಚುನಾವಣೆಯಲ್ಲಿ ಆಯ್ಕೆಯಾಗಿ ಎಂದು ರಾಜ್ಯ ಬಿಜೆಪಿ ಶಾಸಕರಿಗೆ ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು ಆಗ್ರಹಿಸಿದ್ದಾರೆ.