ಪಡುಬಿದ್ರೆ: ಉದ್ಯೋಗ ಇಲ್ಲದ ಚಿಂತೆ, ಯುವಕ ಆತ್ಮಹತ್ಯೆ

ಪಡುಬಿದ್ರೆ, ಜೂ.27: ಲಾಕ್‌ಡೌನ್‌ನಿಂದ ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲೂರು ಗ್ರಾಮ ಮಣಿಯೂರು ಎಂಬಲ್ಲಿ ಜೂ.26 ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಮಣಿಯೂರು ನಿವಾಸಿ ವಿಕ್ಟರ್ ಡಿಸೋಜ ಎಂಬವರ ಪುತ್ರ
ಅರ್ನಾಲ್ಡ್ ಡಿಸೋಜ(29) ಎಂದು ಗುರುತಿಸಲಾಗಿದೆ.

ಸುಮಾರು 1 ವರ್ಷ ನಾಲ್ಕು ತಿಂಗಳ ಹಿಂದೆ ವಿದೇಶದಲ್ಲಿ ಕೆಲಸ ಬಿಟ್ಟು ಊರಿಗೆ ಬಂದಿದ್ದ ಅವರು, ಕಾಪುವಿನಲ್ಲಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್‌ಡೌನ್ ನಂತರ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಮಲಗುವ ಕೋಣೆಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!