ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್: ಕೋವಿಡ್ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ
ಉಡುಪಿ: ಕೋವಿಡ್ 19ಸಂದರ್ಭದಲ್ಲಿ ವಿಪ್ರ ಸಮಾಜದ ಅನಾರೋಗ್ಯದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ನೀಡಲಾಯಿತು.
ಸಂಕಷ್ಟದಲ್ಲಿರುವ ಮನೆಯವರಿಗೆ ತಲಾ 10000 ದಂತೆ ಆರ್ಥಿಕ ಸಹಾಯವನ್ನೂ, ಅಗತ್ಯ ಇರುವ ಮನೆಗೆ ಗ್ಯಾಸ್ ಸಂಪರ್ಕವನ್ನೂ ದಾನಿಗಳ ಸಹಕಾರದಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಪರಿಷತ್ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್ ಪ್ರಸ್ತಾವಿಕದಲ್ಲಿ ಸಂಸ್ಥೆ ವಿಪ್ರ ಸಮಾಜಕ್ಕಾಗಿ ನಡೆಸುತ್ತಿರುವ ಕೋವಿಡ್ ಸಹಾಯವಾಣಿಯ ಬಗ್ಗೆಯೂ ಅರಿವು ಮೂಡಿಸಿದರು. ಮುಖ್ಯ ಅಥಿತಿಗಳಾಗಿ ರಘುಪತಿ ರಾವ್ ಕಿನ್ನಿಮುಲ್ಕಿ, ವಿವೇಕ್ ಪಾಂಗಣ್ಣಯ ಉಪಸ್ಥಿತರಿದ್ದು ನೆರವಿನ ಚೆಕ್ ನೀಡಿದರು. ಕಾರ್ಯದರ್ಶಿ ಪ್ರವೀಣ್ಉಪಾಧ್ಯ ನಿರೂಪಿಸಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಧನ್ಯವಾದ ನೀಡಿದರು.