ಸ್ವರ್ಗ ನಿರ್ಮಾಣ ಮಾಡುತ್ತೇವೆ ಎಂದವರು ತೈಲ ಬೆಲೆ ಏರಿಕೆಯಾದಾಗ ಅಂಧರಂತೆ ಕುಳಿತಿದ್ದಾರೆ- ದೀಪಕ್ ಕೋಟ್ಯಾನ್
ಉಡುಪಿ: ದೇಶದಲ್ಲಿ ದಿನೇ-ದಿನೇ ಪೆಟ್ರೋಲ್-ಡಿಸೇಲ್ ದರ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಕಟುವಾಗಿ ಟೀಕಿಸಿದ್ದಾರೆ. ಕೊವಿಡ್ ಸಂದರ್ಭ ದಲ್ಲಿ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಲಾಗದ ಪರಿಸ್ಥಿತಿ ಜನಸಾಮಾನ್ಯರು ಮೌನವಾಗಿ ಕುಳಿತಿದ್ದಾರೆ.ಇದೇ ಪರಿಸ್ಥಿತಿಯ ಲಾಭ ಪಡೆದ ಮೋದಿ ಸರಕಾರ ಮನಸೋಇಚ್ಛೆ ಬೆಲೆ ಏರಿಕೆಗೊಳಿಸುತ್ತಿದೆ. ಜನಸಾಮಾನ್ಯರ ಅಸಹಾಯಕೆಯ ಸುರ್ಬಳಕೆ ಪಡೆದು ನಂಪುಸಕತೆಯನ್ನು ಸರಕಾರ ಪ್ರದರ್ಶಿಸುತ್ತಿದೆ. ತೈಲ ಬೆಲೆ ಏರಿಕೆ ಈ ಕೊರೊನಾ ಸಂದರ್ಭದಲ್ಲಿ ಬಡ-ಮಧ್ಯಮ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಎದುರಾಗಿದೆ.
ಇದೇ ಮೊದಲ ಬಾರಿಗೆ ದೇಶದಲ್ಲಿ ಸಾಮಾನ್ಯ ಪೆಟ್ರೋಲ್ ದರ 100 ರೂ.ಗಳ ಗಡಿ ದಾಟಿದ್ದು,ಡೀಸೆಲ್ ದರವೂ ಹೆಚ್ಚು ಕಡಿಮೆ ಎಲ್ಲಾ ನಗರಗಳಲ್ಲಿ ಗರಿಷ್ಠ ಮಟ್ಟದಲ್ಲಿದೆ.ಇತ್ತ ಜನರು ದರ ಏರಿಕೆಯಿಂದ ಕಂಗಾಲಾಗಿದ್ದರೆ,ದಾಖಲೆಗಳ ಪ್ರಕಾರ 2019-20ರಲ್ಲಿ ಭಾರತ ಶೇ.85ರಷ್ಟು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದರೆ ಶೇ. 53ರಷ್ಟು ಗ್ಯಾಸ್‍ನ್ನು ವಿದೇಶಗಳಿಂದ ತರಿಸಿ ಕೊಂಡಿತ್ತು.ಆದರೆ ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳು ಸದ್ಯ ಅಷ್ಟೇನೂ ಹೆಚ್ಚಿಲ್ಲ ಮತ್ತು ರೂಪಾಯಿ – ಡಾಲರ್ ದರವು ಹೆಚ್ಚು ಕಡಿಮೆ ಸ್ಥಿರವಾಗಿದೆ. ಹೀಗಾಗಿ ಆಮದಿನ ಮೇಲಿನ ಹೆಚ್ಚಿನ ಅವಲಂಬನೆಯ ಹೊರತಾಗಿಯೂ ಪೆಟ್ರೋಲ್-ಡೀಸೆಲ್ ದರ ಇಷ್ಟೊಂದು ಏರಬೇಕಾಗಿಲ್ಲ ಎಂಬುದು ಸಾಮಾನ್ಯ ಜ್ಞಾನ.
ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ ಪೆಟ್ರೋಲ್ ಲೀಟರ್‍ಗೆ 75 ರೂಪಾಯಿಗೆ ಮಾರಾಟವಾಗುತ್ತಿತ್ತು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‍ಗೆ ಬರೋಬ್ಬರಿ 110 ಡಾಲರ್ ತಲುಪಿತ್ತು. ಆದರೆ ಈಗ ಕಚ್ಚಾತೈಲದ ಬೆಲೆ 60 ಡಾಲರ್ ಆಸುಪಾಸಿನಲ್ಲಿದೆ. ಆದರೆ ದೇಶದಲ್ಲಿ ಪೆಟ್ರೋಲ್ ಬೆಲೆ 90 ರೂ. ದಾಟಿದೆ ಎಂದು ಅಂಕಿ-ಅಂಶದೊಂದಿಗೆ ಮೋದಿ ಸರಕಾರದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸ್ವಯಂ ಘೋಷಿತ ವಿಶ್ವಗುರು ನರೇಂದ್ರ ಮೋದಿ ಆಳ್ವಿಕೆಗೆ ಬಂದರೆ ಸ್ವರ್ಗ ನಿರ್ಮಾಣ ಮಾಡುತ್ತೇವೆ ಎಂದು ಬೊಗಳುತ್ತಿದ್ದರು. ಆದರೆ ತೈಲ ಬೆಲೆ ಏರಿಕೆಯಾದಾಗ ಬಿಜೆಪಿ ಪಕ್ಷದವರು ಅಂಧರಂತೆ ಕುಳಿತುಬಿಟ್ಟಿದ್ದಾರೆ.
ಕೊರೊನಾ ಸಂಕಷ್ಟದ ಹೊತ್ತಿನಲ್ಲಿ ಪ್ರತಿ ಮನೆಗೆ 10 ಸಾವಿರ ರೂಪಾಯಿ ನೆರವಿನ ಹಸ್ತ ಕೇಂದ್ರ ಸರಕಾರ ನೀಡಬೇಕಿತ್ತು ಆದರೆ ಜನರ ಮೇಲೆ ಯಾವುದೇ ಅನುಕಂಪ ತೊರದೆ ದಿನೇ-ದಿನೇ ಬೆಲೆ ಏರಿಕೆ ಮಾಡುತ್ತಾ ಹೊದರೆ ಯುವ ಕಾಂಗ್ರೆಸ್ ಜನರ ಪರ ಬೀದಿಗಿಳಿದು ಪ್ರತಿಭಟನೆ ಮಾಡಲು ಸಿದ್ಧವಿದೆ.ಕೆಸ್ ದಾಖಲಾದರು ಜನರಿಗಾಗಿ ಎಷ್ಟು ಕೇಸ್ ಹಾಕಿಸಿಕೊಳ್ಳಲು ಯುವ ಕಾಂಗ್ರೆಸ್ ಎಂದೂ ಸಿದ್ಧವೆಂದು ವಾಗ್ದಾಳಿ ನಡೆಸಿದ್ದಾರೆ.